ಬಾಗಲಕೋಟೆ: ಲಾರಿ ಹಾಗೂ ಎತ್ತಿನ ಗಾಡಿ ನಡುವೆ ಭೀಕರ ರಸ್ತೆ ಅಪಘಾತ  ಸಂಭವಿಸಿದ ಪರಿಣಾಮ 7 ಮಂದಿ, 2 ಎತ್ತುಗಳು ಸ್ಥಳದಲ್ಲಿಯೇ   ಮೃತಪಟ್ಟಿರುವ ದಾರುಣ ಘಟನೆ ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮದ ಬಳಿ ಶುಕ್ರವಾರ ಸಂಜೆ ನಡೆದಿದೆ.

ಮೃತರನ್ನು ರಕ್ಕಸಗಿ ಗ್ರಾಮದ ಚಂದ್ರಯ್ಯ ಹಿರೇಮಠ(೫೭), ಲಕ್ಮೀಬಾಯಿ ಚಂದ್ರಯ್ಯ ಹಿರೇಮಠ(೪೭), ಕಾಶೀಬಾಯಿ ಚಂದ್ರಯ್ಯ ಹಿರೇಮಠ (೨೨), ವಿಜಯಲಕ್ಷ್ಮಿ ಚಂದ್ರಯ್ಯ ಹಿರೇಮಠ(೨೦), ಬಸಮ್ಮ ಗೊರಬರ, ಸಿದ್ದವ್ವ ಹೂಗಾರ, ಗಂಗವ್ವ ಹೂಗಾರ ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಗಂಗವ್ವ ಭೀಮಸಿ ಗೌಡರ ಮತ್ತು ಶಾನಬಸವ್ವ ಮಠ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಅಮೀನಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

By suddi9

Leave a Reply

Your email address will not be published. Required fields are marked *