KAR_7248

ಬಂಟ್ವಾಳ: ಉದಾಸೀನ ತೋರದೆ ಬಂಟ್ವಾಳ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿಪಡಿಸಿದ್ದು, ಮುಂದೆ ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿ ಜನರ ಸೇವೆ ಮಾಡಲು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಆಶೀರ್ವದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮನವಿ ಮಾಡಿದ್ದಾರೆ.

ತಾಲೂಕಿನ ಸಜಿಪ ಮೂಡ ಗ್ರಾಮದ ಕಾರಾಜೆ-ನೀಲ್ಯ-ಕುಚ್ಚಿಗುಡ್ಡೆ-ಮಿತ್ತಮಜಲು-ಕಾಂತಾಡಿ-ಕೂಡೂರು-ಕೊಳಕೆ ರಸ್ತೆ ಕಾಮಗಾರಿಯ ಸಭಾಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ಬಹುಜನರ ಬೇಡಿಕೆಗೆ ಸ್ಪಂದಿಸಲು ಈ ರಸ್ತೆಗೆ 2ಕೋಟಿ.50ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಡಾಂಬರು ಕಾಮಗಾರಿ ನಡೆಯಲಿದ್ದು, ಅದೇ ರೀತಿ ಜಿ.ಪಂ.ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮೂಲಕ ಅಭಿವೃದ್ಧಿ ಪಡಿಸಲು ಆರಂಬಿಸಲಾಗುವುದು ಎಂದು ತಿಳಿಸಿದರು.

KAR_7242

ಈ ವೇಳೆ ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜರವರನ್ನು ಸಚಿವರು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ   ಜಿ.ಪಂ.ಮಾಜಿ ಅಧ್ಯಕ್ಷ ಬಿ.ಸದಾನಂದ ಪೂಂಜ ಮಾತನಾಡಿದರು.    ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ,  ತಾ.ಪಂ.ಸದಸ್ಯ ಸಂಜೀವ ಪೂಜಾರಿ, ಸಜಿಪಮೂಡ ಗ್ರಾ.ಪಂ.ಅಧ್ಯಕ್ಷ ವಿಶ್ವನಾಥ ಬೆಳ್ಚಾಡ, ಮಾಜಿ ಅಧ್ಯಕ್ಷ ಗಣಪತಿ ಭಟ್, ಮಾಜಿ ಸ್ಥಾಯಿಸಮಿತಿ ಅಧ್ಯಕ್ಷ ಮಾಧವ ಮಾವೆ,  ರಮೇಶ್ ಎಂ.ಪಣೋಲಿಬೈಲು, ಯೋಗೀಶ್ ಬೆಳ್ಚಾಡ,  ಅಬ್ದುಲ್ ಕುಂಞಿ,  ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಇಂಜಿನಿಯರ್ ರವೀಂದ್ರನಾಥ್, ಗುತ್ತಿಗೆದಾರ ಅಬ್ದುಲ್ ಖಾದರ್, ಕೊಳಕೆ ಜುಮ್ಮಾ ಮಸೀದಿ ಅಧ್ಯಕ್ಷ ಮೊಹಮ್ಮದ್ ಹಾಜಿ, ಪ್ರಮುಖರಾದ ಪ್ರಭಾಕರ್ ಶೆಟ್ಟಿ, ಪುಷ್ಪಾವತಿ,  ಸೀತಾರಾಮ ಶೆಟ್ಟಿ,  ಕರೀಂ ಹಾಜಿ, ಚಂದ್ರಶೇಖರ ಶೆಟ್ಟಿ  ಉಪಸ್ಥಿತರಿದ್ದರು.

ವಲಯ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಝೀಝ್ ವಂದಿಸಿ, ಗಿರೀಶ್ ಪೂಜಾರಿ ಪೆರ್ವ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *