ಬಂಟ್ವಾಳ:ತಾಲ್ಲೂಕಿನ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯ ತಣ್ಣೀರುಪಂಥ ಸಮೀಪದ ತುರ್ಕಳಿಕೆ ಎಂಬಲ್ಲಿ ಮಾ.1ರಂದು ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಶನಿವಾರ ರಾತ್ರಿ ನಡೆದಿದೆ. ಮೃತರನ್ನು ಹಷೀಯಾ ಭಾನು (20) ಎಂದು ಗುರುತಿಸಲಾಗಿದ್ದು, ಈಕೆಗೆ ಪುಟ್ಟ ಮಗು ಇದೆ.

ಕಳೆದ ಎರಡು ವರ್ಷಗಳ ಹಿಂದೆ ವಿಟ್ಲಪಡ್ನೂರು ಗ್ರಾಮದ ಕಂಬಳಬೆಟ್ಟು ನಿವಾಸಿ ರಿಯಾಝ್ ಎಂಬವರ ಪುತ್ರ ಆಸಿಫ್ ಎಂಬಾತನಿಗೆ ಈಕೆಯನ್ನು ವಿವಾಹ ಮಾಡಿಕೊಡಲಾಗುತ್ತು. ಆ ಮನೆಯಲ್ಲಿ ಪತಿ ಆಸಿಫ್ ಸೇರಿದಂತೆ ಮಾವ ರಿಯಾಝ್, ಅತ್ತೆ ಅಮಿನಾ, ಸಂಬಂಧಿಕರಾದ ಆಯಿಷಾ, ನೂರ್ಜಾನ್, ಸತ್ತಾರ್ ಎಂಬವರು ತೀವ್ರವಾಗಿ ಮಾನಸಿಕ ಮತ್ತು ದೈಹಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ಆಕೆ ಆತ್ಮಹತ್ಯೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *