ಮಂಗಳೂರು: ಶಾಸಕ ಜೆ.ಆರ್.ಲೋಬೊರವರ ಶಿಪಾರಸ್ಸಿನ ಮೇರೆಗೆ ವಹಾಬ್ ಕುದ್ರೋಳಿ ಅವರನ್ನು ಮಂಗಳೂರು ನಗರ ಬ್ಲಾಕ್ ನ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ನೂತನ ಮಂಗಳೂರು ನಗರ ಬ್ಲಾಕ್ ನ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷರ ಆದೇಶ ಪತ್ರವನ್ನು ದ.ಕ.ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಲೋಕೇಶ ಹೆಗ್ಡೆ ಪುತ್ತೂರು, ಅವರು ವಹಾಬ್ ಕುದ್ರೋಳಿ ಅವರಿಗೆ ನೀಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ಘಟಕದ ಕಾರ್ಯದರ್ಶಿ ಹಯಾತುಲ್ಲಾ ಕಾಮಿಲ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ನಝೀರ್ ಬಜಾಲ್, ಕಾರ್ಮಿಕ ಘಟಕದ ಜಿಲ್ಲಾ ಉಪಾಧ್ಯಕ್ಷ ಮೋಹನ ಮೆಂಡನ್ ಮೊದಲಾದವರು ಉಪಸ್ಥಿತರಿದ್ದರು.
.
