211

ಕುಲಬುರಗಿ: ಕೆಪಿಎಸ್ಸಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿ ಬಂಧನಕ್ಕೊಳಗಾದ ಶಂಕಿತ ಆರೋಪಿಗಳಿಗೆ ಸಹಾಯ ಮಾಡಿದ ಆರೋಪದ ಮೇಲೆ ಒಬ್ಬರು ಪೊಲೀಸ್ ಪೇದೆಗಳನ್ನು ಅಮಾನತುಗೊಳಿಸಿ ಎಸ್ಪಿ ಶಶಿಕುಮಾರ ಆದೇಶ ಹೊರಡಿಸಿದ್ದಾರೆ.

police-1-1521266001-e1521272449366

ಅಶೋಕ ನಗರ ಠಾಣೆ  ಮಲ್ಲಿಕಾರ್ಜುನ್, ರೈಟರ್ ನೆಹರೂ ಸಿಂಗ್ ಅಮಾನತುಗೊಂಡ ಪೇದೆಗಳು ಎಂದು ಗುರುತಿಸಲಾಗಿದೆ.

ಕೆಪಿಸಿಎಸ್ಸಿ ಪರೀಕ್ಷೆಯಲ್ಲಿ ಅತಿ ಸೂಕ್ಷ್ಮ ತಂತ್ರಜ್ಞಾನ ವಸ್ತುಗಳನ್ನು ಬಳಸಿ ಅಕ್ರಮ ನಡೆಸುತ್ತಿದ್ದ ಗ್ಯಾಂಗ್ ಪತ್ತೆ ಹಚ್ಚಿದ ಪೊಲೀಸರು  ಈ ಸಂಬಂಧ ಇಬ್ಬರನ್ನು ಬಂಧಿಸಿದ್ದರು. ತನಿಖೆ ನೆಪದಲ್ಲಿ ಪೇದೆಗಳಿಬ್ಬರು ಅಭ್ಯರ್ಥಿಗಳಿಂದ ಲಕ್ಷಾಂತರ ಹಣ ದೋಚಿದ್ದಾರೆ ಎನ್ನಲಾಗಿದ್ದು, ಈ ಆರೋಪದ ಮೇಲೆ ಇಬ್ಬರು ಪೇದೆಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By suddi9

Leave a Reply

Your email address will not be published. Required fields are marked *