images

ಉಳ್ಳಾಲ: ಕೈರಂಗಳ ಪುಣ್ಯಕೋಟಿ ನಗರದ ಅಮೃತಾಧಾರಾ ಗೋಶಾಲೆಯಿಂದ ತಲವಾರು ತೋರಿಸಿ ಗೋ ಕಳವು ಮಾಡಿದ ಮೂವರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗ್ರೆ ಕಸಬಾ ನಿವಾಸಿ ಅಹಮ್ಮದ್‌ ಕಬೀರ್‌ ಎಂ.ಜೆ., ಮಂಜೇಶ್ವರ ಪೈವಳಿಕೆ ನಿವಾಸಿ ಅಬೂಬಕ್ಕರ್‌ ಸಿದ್ದಿಕ್‌ ಯಾನೆ ಕರ್ಪೆ ಸಿದ್ದಿಕ್‌, ಉಳ್ಳಾಲಮಿಲ್ಲತ್‌ ನಗರ ನಿವಾಸಿ ಮೊಹಮ್ಮದ್‌ ಇಮ್ರಾನ್‌ ಎಂದು ಗುರುತಿಸಲಾಗಿದೆ. ನಾಲ್ವರಿಗಾಗಿ ಶೋಧ ಮುಂದುವರಿಸಿದ್ದಾರೆ.

ಇನ್ನೂ ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳ ಬಂಧನಕ್ಕೆ ಆಮರಣಾಂತ ಉಪವಾಸ ಸತ್ಯಾಗ್ರಹದ ಮೂಲಕ  ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದು ಇಲ್ಲಿ ಸ್ಮರಿಸಿಕೊಳ್ಳಬಹುದು.

By suddi9

Leave a Reply

Your email address will not be published. Required fields are marked *