ಪಳ್ಳತ್ತಡ್ಕ:ಅನಾದಿ ಕಾಲದಿಂದಲೂ ಯೋಗ ನಮ್ಮ ಸಂಸ್ಕೃತಿಯ ಭಾಗವಾಗಿದೆ .ಯೋಗದ ಗುರಿ ದೇಹ ಮತ್ತು ಮನಸ್ಸಿನ ಸಮತೋಲನವನ್ನು ಸಾಧಿಸುವುದರೊಂದಿಗೆ ವ್ಯಕ್ತಿ ಮತ್ತು ಅವನ ಸುತ್ತಲ ಪ್ರಪಂಚದೊಂದಿಗೆ ಸಂಪೂರ್ಣ ಏಕತೆಯನ್ನು ಸಾಧಿಸುವುದೇ ಆಗಿದೆ .ಇದು ವ್ಯಕ್ತಿಯ ಮಾನಸಿಕ ಸ್ವಾಸ್ಥ್ಯವು ಸೇರಿದಂತೆ ಸಮಗ್ರ ವ್ಯಕ್ತಿತ್ವದ ವಿಕಾಸಕ್ಕೆ ಶ್ಯೆಕ್ಷಣಿಕ ಪ್ರಕ್ರಿಯೆಯಾಗಿರುತ್ತದೆ . ಯೋಗ ಒಂದು ಜೀವನ ವಿಧಾನವಾಗಿದೆ . ದೇಹ , ಬುದ್ದಿ ಮತು ಮನಸ್ಸಿಗೆ ಅತೀತವಾದ ಅಸ್ತಿತ್ವ ಯೋಗದ ಪರಮ ಗುರಿಯಾಗಿದೆ . ಯೋಗ ಎಂಬುವುದು ನಮ್ಮ ಋಷಿಮುನಿಗಳು ಕಂಡುಕೊಂಡ ಒಂದು ಜೀವನ ಶೈಲಿಯಾಗಿದೆ . ಅದರ ಮೂಲಕ ನಮ್ಮೊಳಗಿರುವ ಅಂತಶಕ್ತಿಯ ಜಾಗೃತಿ ಮತ್ತು ಅರಿವು ಮೂಡುವುದು. ಅರಿವು ಎಂದರೆ ಜ್ಞಾನ, ಜ್ಞಾನ ಅಂದರೆ ಸತ್ಯ, ಈ ಸತ್ಯ ಮಾರ್ಗದಲ್ಲಿ ನಡೆಯುವುದೇ ಯೋಗ . ಸರಳ ಜೀವನ, ಉದಾತ್ತ ಚಿಂತನೆ ಇದು ಯೋಗದ ಒಂದು ವಿಧಾನ .

IMG-20180622-WA0052
ಇಂದಿನ ಈ ಆಧುನಿಕ ಜೀವನ ಶೈಲಿಯಲ್ಲಿ ಎಲ್ಲವೂ ಬಹಳ ಯಾಂತ್ರಿಕವಾಗಿ ನಡೆಯುತ್ತದೆ.ಆಹಾರ , ನಿದ್ದೆ , ವ್ಯಾಯಾಮ , ಯಾವುದೂ ಸರಿಯಾದ ಕ್ರಮದಲ್ಲಿಲ್ಲ .ಒತ್ತಡ ಸಂಬಂಧಿ ಖಾಯಿಲೆಗಳು ಹೆಚ್ಚುತಾ ಬರುತ್ತದೆ . ದೈಹಿಕ , ಮಾನಸಿಕ , ಸಾಮಾಜಿಕ ಹಾಗು ಆಧ್ಯಾತ್ಮಿಕ ಆರೋಗ್ಯದಲ್ಲಿ ಎಂಟು ಹಂತದ ಬೆಳವಣಿಗೆಯನ್ನು ಒಳಗೊಂಡಿರುವ ಅಭ್ಯಾಸದ ವಿಧಾನವೆಂದರೆ ಯೋಗ.

IMG-20180622-WA0053

ಜೂನ್ 21 ವಿಶ್ವ ಯೊಗ ದಿನವನ್ನಾಗಿ ಆಚರಿಸಲಾಗುತ್ತದೆ . ಇಂದಿನ ವೇಗದ ಯುಗದಲ್ಲಿ ಯೋಗಕ್ಕೆ ಸಮಯ ಸಿಗುತ್ತದೆಯೇ ? ಎಂಬುವುದು ಕೆಲವರ ಪ್ರಶ್ನೆಯಾಗಿರಬಹುದು . ಯೋಗಕ್ಕೆ ದಿನಗಟ್ಟಲೆ , ಗಂಟೆಗಟ್ಟಲೆ ಸಮಯವೇನೂ ಅಗತ್ಯವಿಲ್ಲ . ದಿನದ 24 ಗಂಟೆಯಲ್ಲಿ ಕೇವಲ 20 ನಿಮಿಷ ಯೋಗ ಮಾಡಿದರೆ ಸಾಕು . ನಮ್ಮ ದೇಹ ಹಾಗೂ ಮನಸ್ಸಿಗೆ ಸಂತೋಷ , ಶಕ್ತಿಯನ್ನು ನೀಡಬಹುದು .

ಯೋಗ ಎಂಬುದು ಆಸನ ,ಪ್ರಾಣಾಯಾಮ , ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮೀರಿದಂಥದ್ದು . ಇದು ಯಾವುದೇ ಜಾತಿ , ಮತ , ಧರ್ಮಕಷ್ಟೆ ಸೀಮಿತವಾದುದಲ್ಲ .ಇದು ಎಲ್ಲ ಕಾಲಗಳಲ್ಲೂ ಸಲ್ಲುವ ವಿಜ್ಞಾನ . ಯೋಗದ 4 ಮಾರ್ಗಗಳು ಹೀಗಿವೆ .

೧)ಕರ್ಮಯೋಗ

2) ಭಕ್ತಿಯೋಗ

3) ರಾಜಯೋಗ

೪)ಜ್ಞಾನಯೋಗ

IMG-20180622-WA0054 (1)
ವಿಶೇಷವಾಗಿ ಮಕ್ಕಳಲ್ಲಿ ಯೋಗದ ಅರಿವನ್ನು ಮೂಡಿಸುವುದು ಆವಶ್ಯವಾಗಿದೆ .ಬಾಲ್ಯದಲ್ಲಿ ಕಲಿತ ವಿದ್ಯೆ ಜೀವನದಲ್ಲಿ ಶಾಶ್ವತವಾಗಿ ಉಳಿಯುವುದು .ಶುದ್ಧ ಆಹಾರ , ಗಾಳಿಯಿಂದ ಶುದ್ಧ ಮನಸ್ಸನ್ನು ಸಾಕಾರಗೊಳಿಸಲು ಯೋಗ ಅನುಕೂಲ .ಇದರಿಂ ದ ಮಕ್ಕಳ ಕಲಿಕೆಗೂ ಅನುಕೂಲವಾಗುತ್ತದೆ.ಯೋಗದ ಪೂರಾ ಲಾಭ ಪಡೆಯಲು ತಾಳ್ಮೆ ಹಾಗೂಗು ಸತತ ನಿಷ್ಠೆ ಇರಬೇಕು .

ಇದೆ ರೀತಿ ಬಹಳ ಉತ್ಸಾಹಭರಿತವಾದ ಯೋಗ ತರಗತಿಯು ಎ ,ಯು ,ಪಿ , ಶಾಲೆ ಪಳ್ಳತ್ತಡ್ಕ ದಲ್ಲೂ ಜರಗಿತು . ವಿಶ್ವ ಯೋಗ ದಿನದಂದು ಮಕ್ಕಳಿಗೆ ಯೋಗ ದ ಪ್ರಾಮುಖ್ಯತೆಯನ್ನು ತಿಳಿಸಿ ಯೋಗಾಭ್ಯಾಸವು ನಡೆಯಿತು . ಅಧ್ಯಾಪಕರಾದ ಶ್ರೀ ವಿಘ್ನೇಶ್ ರವರು ಸಂಪೂರ್ಣ ಜವಾಬ್ಡಾರಿಯನ್ನು ವಹಿಸಿಕೊಂಡು ತರಗತಿಯನ್ನು ನಡೆಸಿಕೊಟ್ಟರು . ಯೋಗದ ಬಗ್ಗೆ ತಮಗಿರುವ ಜ್ಞಾನವನ್ನು ಮಕ್ಕಳಿಗೆ ನೀಡುವ ಮೂಲಕ ಮಾದರಿಯಾದರು . ಇದರಲ್ಲಿ ಭಾಗವಹಿಸಿದ ಮಕ್ಕಳು ಯೋಗದ ಪ್ರಯೋಜನವನ್ನು ಪಡೆದುಕೊಂಡರು . ದೇಹ ಹಾಗೂ ಮನಸಿಗೆ ತಂಪನ್ನೀಯುವ ಯೋಗದ ಅಭ್ಯಾಸವು ಮಕ್ಕಳಿಗೆ ಹೊಸ ಅನುಭವವನ್ನು ನೀಡಿತು .

By suddi9

Leave a Reply

Your email address will not be published. Required fields are marked *