ವಿಟ್ಲ: ನಾಯಕತ್ವ ಎನ್ನುವುದು ಸೃಜನಶೀಲತೆಯಿಂದ ಸೃಷ್ಟಿಯಾಗುತ್ತದೆ.ಶಿಸ್ತು,ಸಂಯಮ,ಅಭಿಮಾನ,ಜವಾಬ್ದಾರಿ ನಾಯಕನ ಪ್ರಮುಖ ಗುಣಗಳು.ಈ ಅಂಶಗಳು ವಿದ್ಯಾರ್ಥಿಯ ವ್ಯಕ್ತಿತ್ವದಲ್ಲಿ ಇದ್ದಾಗ ಪ್ರತಿಯೊಬ್ಬನು ಸಮರ್ಥ ನಾಯಕನಾಗುತ್ತಾನೆ.ಎಂದು ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ .ಬಿ.ವಿ.ಸೂರ್ಯನಾರಾಯಣ ಭಟ್ ಇವರು ಹೇಳಿದರು.
ಅವರು ವಿಠಲ ಪದವಿಪೂರ್ವ ಕಾಲೇಜಿನ 2018-19ನೇ ಸಾಲಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠಲವಿದ್ಯಾ ಸಂಘದ ಕಾರ್ಯದರ್ಶಿ ಯಶವಂತ ವಿಟ್ಲ ಇವರು ವಹಿಸಿದ್ದರು. ವಿಠಲವಿದ್ಯಾ ಸಂಘದ ಸಂಚಾಲಕರಾದ ಎ.ಎನ್.ಕೂಡೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಆಯಿಶತ್ ಶಮ್ನಾ,ಶ್ರೀಶ ಕೆ ಆಯ್ಕೆಯಾದ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಅಭಿನಂದಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಪ್ರಜ್ವಲ್ ಕುಮಾರ್,ಉಪಾಧ್ಯಕ್ಷನಾಗಿ ಕಾರ್ತಿಕ್,ಕಾರ್ಯದರ್ಶಿಯಾಗಿ ಫಾತಿಮತ್ ಶಿಫಾ,ಜತೆಕಾರ್ಯದರ್ಶಿಯಾಗಿ ಮರಿಯಮ್ಮತ್ ಶಮ್ಲ ಆಯ್ಕೆಯಾದರು.

ಕಾಲೇಜಿನ ಪ್ರಾಂಶುಪಾಲ ಆದರ್ಶ ಚೊಕ್ಕಾಡಿ ಸ್ವಾಗತಿಸಿ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿ,ಪ್ರಜ್ವಲ್ ಕುಮಾರ್ ವಂದಿಸಿ,ಆಯಿಶತ್ ಶಲೀನಾ ಕಾರ್ಯಕ್ರಮ ನಿರೂಪಿಸಿದರು.