ಬಂಟ್ವಾಳ:ದೇಶದಲ್ಲಿ ಕಳೆದ ಎರಡು ಸಾವಿರ ವರ್ಷಗಳಿಂದಲೂ ಮುಸ್ಲಿಂ ಮತ್ತು ಕ್ರೈಸ್ತ ಮತ ಪ್ರಚಾರಕರು ಹಿಂದುತ್ವ ದಮನಕ್ಕೆ ಪ್ರಯತ್ನ ನಡೆಸಿದ ಇತಿಹಾಸ ಇದೆ. ದೇಶದ್ರೋಹಿಗಳು, ಭಯೋತ್ಪಾದಕರು, ಮತೀಯವಾದಿಗಳು ಇದಕ್ಕಾಗಿ ಒಟ್ಟಾಗಿದ್ದಾರೆ. ಹಿಂದುತ್ವ ಉಳಿದರೆ ಮಾತ್ರ ಜಗತ್ತು ಶಾಂತಿಯಿಂದ ಉಳಿಯಲು ಸಾಧ್ಯವಿದೆ ಎಂದು ಆರ್‍ಎಸ್‍ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದ್ದಾರೆ.
ತಾಲ್ಲೂಕಿನ ಸಜಿಪಮುನ್ನೂರು ಗ್ರಾಮ ಕಂದೂರು ಸಮೀಪದ ಪಾಡಿ ಎಂಬಲ್ಲಿ ಆರ್‍ಎಸ್‍ಎಸ್ ಮತ್ತಿತರ ಸಂಘಟನೆ ಹಾಗೂ ಶರತ್ ಅಭಿಮಾನಿಗಳು ನಿರ್ಮಿಸಿದ್ದ ಸ್ಮಾರಕವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.7btl-Sharath

ಆರ್‍ಎಸ್‍ಎಸ್ ಕಾರ್ಯಕರ್ತ ದಿವಂಗತ ಶರತ್ ಮಡಿವಾಳ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ಏಕೆಂದರೆ ಅವರು ವೀರ ಸಾವರ್ಕರ್, ಗುರು ಗೋವಿಂದ ಸಿಂಹ ಮಕ್ಕಳಂತೆ ಹಿಂದುತ್ವ ಮತ್ತು ದೇಶಕ್ಕಾಗಿ ಬಲಿದಾನವಾಗಿ ಮಹಾಪುರುಷರ ಸಾಲಿಗೆ ಸೇರುತ್ತಾರೆ. ಇವರ ಸ್ಮಾರಕ ಯುವ ಜನತೆಗೆ ಪ್ರೇರಣೆಯಾಗಬೇಕು ಎಂದರು.ಶರತ್ ಶಿವನಿಗೆ ಅರ್ಪಿಸಿದ ಪುಷ್ಪದಂತೆ ಮತ್ತೊಮ್ಮೆ ಹುಟ್ಟಿ ಬರಲಿದ್ದು, ಈತನ ಹತ್ಯೆ ಪೂರ್ವ ನಿಯೋಜಿತವಾಗಿದ್ದು, ಇದು ಆತನಿಗೂ ತಿಳಿದಿತ್ತು. ಈ ಹಿಂದೆ ದಾರ್ಶನಿಕ ಡಾ.ಅಂಬೇಡ್ಕರ್ ರಾಷ್ಟ್ರ ಹಿತ ಬಗ್ಗೆ ಚಿಂತಿಸುತ್ತಿದ್ದರೆ. ಕಾಂಗ್ರೆಸ್ ರಾಷ್ಟ್ರ ವಿಭಜಿಸುವ ಬಗ್ಗೆ ಸ್ವಾರ್ಥ ಚಿಂತನೆ ನಡೆಸಿದೆ. ಇದರಿಂದಾಗಿ ದೇಶದಲ್ಲಿ ಮಹಾತ್ಮರು ಮತ್ತು ಪುಣ್ಯನದಿ ಜನಿಸಿದ ಭೂ ಭಾಗವು ನಮ್ಮಲ್ಲಿಲ್ಲ. ದುಷ್ಟ ಮತಾಂಧ ಶಕ್ತಿಗಳಿಗೆ ಕಾಂಗ್ರೆಸ್ ಪರೋಕ್ಷವಾಗಿ ಕುಮ್ಮಕ್ಕು ಮತ್ತು ಬೆಂಬಲ ನೀಡುತ್ತಲೇ ಬಂದಿದೆ ಎಂದು ಆರೋಪಿಸಿದರು.
ಶಾಸಕ ಉಳಿಪಾಡಿಗುತ್ತು ರಾಜೇಶ್ ನಾಯ್ಕ್, ಮೃತರ ತಂದೆ ತನಿಯಪ್ಪ ಮಡಿವಾಳ, ತಾಯಿ ನಳಿನಿ, ಸಹೋದರಿಯರಾದ ಮಲ್ಲಿಕಾ ಎನ್., ಚಂದ್ರಕಲಾ ಮತ್ತಿತರರು ಇದ್ದರು.ಆರಂಭದಲ್ಲಿ ಸತೀಶ್ ಪ್ರೇರಣಾ ಗೀತೆ ಹಾಡಿದರು. ನಿವೃತ್ತ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ಸ್ವಾಗತಿಸಿ, ವಂದಿಸಿದರು.ಪ್ರಮುಖರಾದ ಕೆ. ಹರಿಕೃಷ್ಣ ಬಂಟ್ವಾಳ್, ಬಿ. ದೇವದಾಸ ಶೆಟ್ಟಿ, ನವೀನ್ ಸುವರ್ಣ, ಶರಣ್ ಪಂಪ್‍ವೆಲ್, ಸರಪಾಡಿ ಅಶೋಕ ಶೆಟ್ಟಿ, ಸಂತೋಷ್ ಕುಮಾರ್ ಬೋಳಿಯಾರ್, ಸಚಿನ್ ಮೆಲ್ಕಾರ್, ವಿನೋದ್ ಕೊಡ್ಮಾಣ್, ಪಾಂಡುರಂಗ ಪ್ರಭು, ರೇಖಿ ವಿಜಯ್, ಸದಾನಂದ ಶೆಟ್ಟಿ ರಂಗೋಲಿ, ಕ. ಕೃಷ್ಣಪ್ಪ, ಡಾ. ಕಮಲ ಪ್ರಭಾಕರ ಭಟ್, ಲೋಹಿತ್ ಪಣೋಲಿಬೈಲು ಮತ್ತಿತರ ಅಪಾರ ಮಂದಿ ಕಾರ್ಯಕರ್ತರು ನುಡಿನಮನ ಮತ್ತು ಪುಷ್ಪನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಎಎಸ್ಪಿ ರಿಷಿಕೇಶ್ ಭಗವಾನ್, ಇನ್ಸ್‍ಪೆಕ್ಟರ್ ಟಿ.ಡಿ.ನಾಗರಾಜ್, ನಗರ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದರು.

ನಮ್ಮದು ಪ್ರತಿಕ್ರಿಯೆ ಮಾತ್ರ:
ಜಿಲ್ಲೆಯಲ್ಲಿ ಕಳೆದ 30 ವರ್ಷಗಳಿಂದ ಹಿಂದೂ ಸಮಾಜ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಏಕಾಯೇಕಿ ಹಲ್ಲೆ ಅಥವಾ ಹತ್ಯೆ ನಡೆಸಿದ್ದರೆ ತೋರಿಸಲಿ. ನಮ್ಮದು ಏನಿದ್ದರೂ ಕ್ರಿಯೆಗೆ ಪ್ರತಿಕ್ರಿಯೆ ಮಾತ್ರ. ಪ್ರತೀ ಹಿಂದೂ ವಿರೋಧಿ ಚಟುವಟಿಕೆ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರನ್ನು ಹತ್ಯೆ ನಡೆಸುವಲ್ಲಿ ಕಾಂಗ್ರೆಸ್ ಪರೋಕ್ಷವಾಗಿ ಸಹಕರಿಸುವ ಮೂಲಕ ಮುಸ್ಲಿಮರನ್ನು ದಾರಿ ತಪ್ಪಿಸುತ್ತಿದ್ದಾರೆ. ಶರತ್ ಹತ್ಯೆ ನಡೆಸಿದ್ದ ರಮಾನಾಥ ರೈ ಎಂದು ಯಾರೂ ಹೇಳಿಲ್ಲ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಇಂತಹ ಕೃತ್ಯಗಳಿಗೆ ಪರೋಕ್ಷವಾಗಿ ಕುಮ್ಮಕ್ಕು ಮತ್ತು ಪ್ರೇರಣೆ ನೀಡುತ್ತಲೇ ಬಂದಿದ್ದಾರೆ. ಇದರಿಂದಾಗಿಮುಸ್ಲಿಮರು ಮತ್ತು ಕ್ರೈಸ್ತರ ಬಗ್ಗೆ ಹಿಂದೂಗಳಿಗೆ ತಪ್ಪು ಅಭಿಪ್ರಾಯ ಮೂಡುವಂತಾಗಿದೆ. ಮಾತ್ರವಲ್ಲದೆ ಅಂಗಡಿಗೆ ನುಗ್ಗಿ ಸಂಘದ ಕಾರ್ಯಕರ್ತನನ್ನು ನಿರ್ಭಯವಾಗಿ ಹತ್ಯೆ ನಡೆಸಲು ಮತಾಂಧರಿಗೆ ಸಾಧ್ಯವಾಗಿದೆ. ಇದೀಗ ಚುನಾವಣೆಯಲ್ಲಿ ಸೋತ ಬಳಿಕ ಕಾನತ್ತೂರು, ಕೊಲ್ಲೂರು ಕ್ಷೇತ್ರಗಳಿಗೆ ತೆರಳಿ ನಾಟಕ ಆಡುತ್ತಿದ್ದಾರೆ.
ಶರತ್ ಹತ್ಯೆ ನಡೆಸಿದ ನೈಜ ಆರೋಪಿಗಳು ವಿದೇಶದಲ್ಲಿ ತಲೆಮರೆಸಿಕೊಂಡಿದ್ದು, ನೈಜ ಆರೋಪಿಗಳ ಬಂಧನಕ್ಕೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಡಾ. ಕೆ. ಪ್ರಭಾಕರ ಭಟ್ ಕಲ್ಲಡ್ಕ ಉತ್ತರಿಸಿದರು.

By suddi9

Leave a Reply

Your email address will not be published. Required fields are marked *