ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾರ್ಗದರ್ಶನದಲ್ಲಿ ಕೊೈಲ ಒಕ್ಕೂಟ ವತಿಯಿಂದ ಕೊೈಲ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಆವಶ್ಯಕತೆಗಾಗಿ ತರಕಾರಿ ಬೆಳೆಯಲು ಕೈತೋಟ ರಚನಾ ಕಾರ್ಯಕ್ರಮ ಜರಗಿತು.
ಶ್ರೀ ಕ್ಷೇ.ಧ.ಗ್ರಾ.ಯೋಜನೆ ಒಕ್ಕೂಟಗಳ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಚಂದಪ್ಪ ಮೂಲ್ಯ ಮತ್ತು ಶಾಲಾ ಮುಖ್ಯೋಪಾಧ್ಯಾಯ ವೇದಾನಂದ ಕಾರಂತ ಅವರು ಮಾರ್ಗದರ್ಶನ ನೀಡಿದರು.

1007pkt2
ಯೋಜನೆಯ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ, ಶಿಕ್ಷಕಿ ಪಾಸ್ಕಲ್ಯ ಮತ್ತು ಒಕ್ಕೂಟ ಅಧ್ಯಕ್ಷ ದಾಮೋದರ ಆಚಾರ್ಯ ಸಹಕರಿಸಿದರು.
ಸೇವಾಪ್ರತಿನಿಧಿ ರಾಘವೇಂದ್ರ ಭಟ್, ಪದಾಧಿಕಾರಿಗಳಾದ ನೋಣಯ್ಯ ಸಪಲ್ಯ, ಪ್ರಮೀಳಾ ಶೆಟ್ಟಿ, ಆಶಾ ಭಟ್, ದಯಾವತಿ ಮತ್ತು ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *