ಬೆಂಗಳೂರು: ಜುಲೈ 17ರಂದು ಮೂವರು ಸರಕಾರಿ ಅಧಿಕಾರಿಗಳಿಗೆ ಸಂಬಂಧ ಪಟ್ಟಂತೆ ರಾಜ್ಯದ ಎಂಟು ಸ್ಥಳಗಳಲ್ಲಿ ಏಕಾಏಕಿ ಎಸಿಬಿ ತನಿಖಾಧಿಕಾರಿಗಳು ತನಿಖೆ ನಡೆಸಿದರು. ಎಸಿಬಿ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಲಾಗಿದೆ. ಒಟ್ಟು ಮೂರು ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿ ಪತ್ರವನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ಕೈಮಗ್ಗ ಹಾಗೂ ಜವಳಿ ಇಲಾಖೆಯ ಜಂಟಿ ನಿರ್ದೇಶಕ ಬಿ. ವಿಜಯಕುಮಾರ್ ನಿರಾಳಿ ಅವರ ರೈಲ್ವೆ ಸಮಾನಾಂತರ ರಸ್ತೆಯಲ್ಲಿರುವ ಕಛೇರಿ ಹಾಗೂ ಮನೆಗಳ ಮೇಲೆ ಎಸಿಬಿ ತನಿಖಾಧಿಕಾರಿಗಳು ದಾಳಿ ನಡೆಸಿದಾಗ, 2 ಮನೆಗಳು ಬೆಂಗಳೂರು ಹಾಗೂ ಮಂಗಳೂರು ನಗರದಲ್ಲಿ ಇರುವುದು ತಿಳಿದಿದೆ. ಸುಮಾರು 5 ಗುಂಟೆ ವಿಸ್ತೀರ್ಣದ 2 ನಿವೇಶನಗಳು ಒಳಗೊಂಡಂತೆ ಒಟ್ಟು 4 ನಿವೇಶನಗಳು, 276 ಗ್ರಾಂ ಚಿನ್ನ, 3700 ಗ್ರಾಂ ಬೆಳ್ಳಿ, 2ಕಾರು, 2 ಬೈಕು 190.59 ಲಕ್ಷ ನಗದು, 20 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.
ಕೈಮಗ್ಗ ಹಾಗೂ ಜವಳಿ ಉಪನಿರ್ದೇಶಕ ಗಂಗಯ್ಯರವರ ಮನೆ ಮೇಲೆ ದಾಳಿ ನಡೆಸಿದಾಗ, 1ಮನೆ, 4 ನಿವೇಶನ 4.36 ಎಕರೆ ಜಮೀನು, 0.5 ಎಕರೆ ಕೈಗಾರಿಕಾಭಿವೃದ್ಧಿ ಭೂಮಿ, 220 ಗ್ರಾಂ ಚಿನ್ನ, 670ಗ್ರಾಂ ಬೆಳ್ಳಿ, 1ಕಾರು, ಬೈಕು, 64ಸಾವಿರ ನಗದು, 15 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.
ಚಿಕ್ಕಮಗಳೂರು ಅರಣ್ಯ ಇಲಾಖೆಯ ಎಸಿಎಫ್ ಕೆ.ಎನ್ ರಂಗಸ್ವಾಮಿ ಬಳಿ 1ಬಳಿ, ಕೊಪ್ಪಳ ತಾಲೂಕಿನಲ್ಲಿ 6ಎಕರೆ ಕೃಷಿ ಭೂಮಿ ಇದ್ದು, 585 ಚಿನ್ನ, 2.5 ಬೆಳ್ಳಿ, ಎರಡು ಕಾರು, 2.53 ಲಕ್ಷ ನಗದು, 3ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಹಾಗೂ ದಾಖಲೆಗಳ ಪರಿಶೀಲನಾ ಕಾರ್ಯ ಮುಂದುವರೆದಿದೆ.