ಬಂಟ್ವಾಳ: ಎಸ್ಸೆಸ್ಸೆಫ್ ವಿಟ್ಲ ಡಿವಿಷನ್ ಹಾಗೂ ಮಂಗಳೂರು ಎ.ಜೆ. ಆಸ್ಪತ್ರೆ ವತಿಯಿಂದ ರಕ್ತದಾನ ಶಿಬಿರವು ಜು. 22ರಂದು ಕಂಬಳಬೆಟ್ಟುನಲ್ಲಿ ನಡೆಯಲಿದೆ. ವಕ್ಫ್ ಸಲಹಾ ಸಮಿತಿ ಸದಸ್ಯ ರಶೀದ್ ವಿಟ್ಲ ಕಾರ್ಯಕ್ರಮ ಉದ್ಘಾಟಿಸುವರು.

blood donation

ಅಬೂಬಕರ್ ಫೈಝಿ ದರ್ಗಾ ಝಿಯಾರತ್ ಮಾಡಲಿದ್ದು, ಕಂಬಳಬೆಟ್ಟು ಮುದರ್ರಿಸ್ ಇಬ್ರಾಹಿಂ ಮದನಿ ದುವಾಃ ಆಶೀರ್ವಚನ ನೀಡಲಿದ್ದಾರೆ. ವಿಟ್ಲ ಡಿವಿಷನ್ ಎಸ್ಸೆಸ್ಸೆಫ್ ಅಧ್ಯಕ್ಷ ಅಬ್ದುಲ್ ರಝಾಕ್ ಸಖಾಫಿ ಅಧ್ಯಕ್ಷತೆ ವಹಿಸುವರು. ಎಸ್ಸೆಸ್ಸೆಫ್ ಕಾರ್ಯದರ್ಶಿ ಸಲೀಂ ಹಾಜಿ ಉಪಸ್ಥಿತರಿರುವರು ಎಂದು ಎಸ್ಸೆಸ್ಸೆಫ್ ವಿಟ್ಲ ಡಿವಿಷನ್‍ನ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *