ಬಂಟ್ವಾಳ: ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಬಂಟ್ವಾಳ ಇದರ ಸಾಮಾನ್ಯ ಸಭೆಯು ಶ್ರೀ ರಕ್ತೇಶ್ವರಿ ದೇವಾಲಯದ ಮಿನಿ ಹಾಲನಲ್ಲಿ ಅಸೋಸಿಯೇಷನ್ ಅಧ್ಯಕ್ಷ ಈಶ್ವರ್ ಸಾಲಿಯಾನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ವಾರ್ಷಿಕ ಮಹಾಸಭೆಯ ಬಗ್ಗೆ ಚರ್ಚಿಸಲಾಯಿತುBTW_JULY24_1
ಸ್ಮಾರ್ಟ್ ಕಾರ್ಡ್ ಅರ್ಜಿಯಬಗ್ಗೆ ಮತ್ತು ಅಮ್ ಅದ್ಮಿ ವಿಮಾ ಯೋಜನೆಯ ಬಗ್ಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಸಂತ್ ಮತ್ತು ರಾಜ್ಯ ಉಪಾಧ್ಯಕ್ಷ ಸುರೇಶ್ ಸಾಲಿಯನ್ ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ಯಮ್.ನಾಗೇಶ್ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ಯಾದೇಶ್ ತುಂಬೆ ಲೆಕ್ಕಪತ್ರ ಮಂಡಿಸಿದರು
ರಾಜ್ಯ ಸಮಿತಿಯ ಸೂಚನೆಯಂತೆ ಟೈಲರ್‍ಗಳ ಬೇಡಿಕೆಯನ್ನು ಈಡೇರಿಸಲು ಒತ್ತಾಯಿಸಿ ಸೆ.29ರಂದು ತಾಲ್ಲೂಕಿನ ಕೇಂದ್ರದಲ್ಲಿ ಧರಣಿ ನಡೆಸಬೇಕೆಂದು ತಿಳಿಸಿದರು
ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಂತ್ ಹಾಗು ಮಾಜಿ ಜಿಲ್ಲಾಧ್ಯಾಕ್ಷ ರಮೇಶ್ ಮಾಡೂರು ಮತ್ತು ಎಲ್ಲಾ ವಲಯದ ಸದಸ್ಯರು ಹಾಜರಿದ್ದರು. ಎಂ. ನಾಗೇಶ್ ಧನ್ಯವಾದ ನೀಡಿದರು.

By suddi9

Leave a Reply

Your email address will not be published. Required fields are marked *