ಬಂಟ್ವಾಳ: ತಾಲ್ಲೂಕಿನಲ್ಲಿ ಕಳೆದ ಏಳೆಂಟು ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ನೇತ್ರಾವತಿ ನದಿಯಲ್ಲಿ ನೆರೆ ನೀರು ಉಕ್ಕಿ ಹರಿದು ಇಲ್ಲಿನ ಬಹುತೇಕ ತಗ್ಗು ಪ್ರದೇಶಗಳು ಜಲಾವೃತಗೊಂಡು ರಾತ್ರಿಯಾಗುತ್ತಿದ್ದಂತೆಯೇ ಮತ್ತೆ ನೆರೆ ಭೀತಿ ಆವರಿಸಿದೆ. ಮಂಗಳವಾರ ಮಧ್ಯಾಹ್ನ ಬಳಿಕ ನೇತ್ರಾವತಿ ನದಿ ನೀರಿನ ಮಟ್ಟ ಗರಿಷ್ಟ 9 ಮೀಟರ್ ಮೀರಿ 9.9 ಮೀ. ಎತ್ತರಕ್ಕೆ ಅಪಾಯ ಮಟ್ಟ ತಲುಪಿ ಇಲ್ಲಿನ ನದಿ ತೀರದ ರಸ್ತೆಗಳು ಮುಳುಗಡೆಗೊಂಡಿದೆ.

Swimming
ಈಗಾಗಲೇ ಇಲ್ಲಿನ ಬಡ್ಡಕಟ್ಟೆ, ರಾಯರಚಾವಡಿ, ಆಲಡ್ಕ, ಜಕ್ರಿಬೆಟ್ಟು, ಪಾಣೆಮಂಗಳೂರು, ನಂದಾವರ, ತುಂಬೆ, ಬ್ರಹ್ಮರಕೂಟ್ಲು, ಬಸ್ತಿಪಡ್ಪು, ಕಂಚಿಕಾರಪೇಟೆ, ಅಜಿಲಮೊಗರು, ಕಡೇಶ್ವಾಲ್ಯ, ನಾವೂರು ಮತ್ತಿತರ ಕಡೆ ತಗ್ಗು ಪ್ರದೇಶಗಳಲ್ಲಿ ಅಂಗಡಿ ಮನೆಗಳಿಗೆ ನೆರೆ ನೀರು ನುಗ್ಗಿ ಅಪಾರ ಮೊತ್ತದ ನಷ್ಟ ಸಂಭವಿಸಿದೆ.

Baddakatte
ಇಲ್ಲಿನ ಪಾಣೆಮಂಗಳೂರು ಶಾರದಾ ಪ್ರೌಢಶಾಲೆ, ನಾವೂರು ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ತಾತ್ಕಾಲಿಕವಾಗಿ ಗಂಜಿ ಕೇಂದ್ರ ತೆರೆಯಲಾಗಿದೆ.

Aladka-1 (1)ನಾವೂರು ಮತ್ತು ಪಾಣೆಮಂಗಳೂರಿನ ಆಲಡ್ಕ ತಗ್ಗು ಪ್ರದೇಶಗಳ ಒಟ್ಟು 23 ಮನೆಗಳನ್ನು ಈಗಾಗಲೇ ತೆರವುಗೊಳಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಲಾಗಿದೆ. ಈ ನಡುವೆ ಹಲವಾರು ಮನೆಗಳು ಸ್ವಯಂ ಪ್ರೇರಿತವಾಗಿ ತೆರವುಗೊಂಡಿದ್ದು, ಯಾವುದೇ ಪ್ರಾಣಹಾನಿ ಸಮಭವಿಸಿಲ್ಲ ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.

-Aladka

Ulipady
ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಸಹಾಯಕ ಆಯುಕ್ತ ಎ.ಸಿ.ರೇಣುಕಾ ಪ್ರಸಾದ್, ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ತಹಶೀಲ್ದಾರ್ ಪುರಂದರ ಹೆಗ್ಡೆ, ಉಪ ತಹಶೀಲ್ದಾರ್ ರಾಜೇಶ ನಾಯ್ಕ, ಪುರಸಭೆ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಕಂದಾಯ ನಿರೀಕ್ಷಕ ಕೆ.ರಾಮ ಮತ್ತಿತರರ ತಂಡವು ತಗ್ಗು ಪ್ರದೇಶಗಳಿಗೆ ಭೇಟಿ ನೀಡಿ ಜನತೆಗೆ ಧೈರ್ಯ ತುಂಬಿದ್ದಾರೆ.

Aladka Road
ಬಂಟ್ವಾಳ ನಗರ ಠಾಣೆ, ಗ್ರಾಮಾಂತರ ಠಾಣೆ ಪೆÇಲೀಸರು, ಗೃಹರಕ್ಷಕ ದಳ, ಅಗ್ನಿಶಾಮಕ ದಳ ಸಿಬಂದಿಗಳನ್ನು ಅಪಾಯಕಾರಿ ಸ್ಥಳಗಳಲ್ಲಿ ನಿಯೋಜಿಸಲಾಗಿದ್ದು, ಬಸ್ತಿಪಡ್ಪು, ಆಲಡಕ್, ಕಂಚುಕಾರಪೇಟೆ, ಗೂಡಿನಬಳಿ ರಸ್ತೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

Nethravathi

ಶಂಭೂರು ಎಎಂಆರ್ ಕಿರು ಜಲವಿದ್ಯುತ್ ಘಟಕ ಅಣೆಕಟ್ಟೆಯಿಂದ ಹೆಚ್ಚುವರಿ ನೀರು ಹೊರಗೆ ಹರಿಯ ಬಿಡಲು ಮಂಗಳವಾರ ಬೆಳಿಗ್ಗೆ 11ಗಂಟೆ ಮತ್ತು ಸಂಜೆ 4 ಗಂಟೆಗೆ ಸೈರನ್ ಮೊಳಗಿಸುವ ಮೂಲಕ ಜನರನ್ನು ಎಚ್ಚರಿಸಿದ್ದಾರೆ.
Nethravathi
ಇಲ್ಲಿನ ತುಂಬೆಯಲ್ಲಿ 13 ಅಡಿ ಎತ್ತರದ ಹಳೆ ಸೇತುವೆ ಮುಳುಗಡೆಗೊಂಡಿದ್ದು, 11ಮೀ ಎತ್ತರದ ಹೊಸ ಅಣೆಕಟ್ಟೆಯಲ್ಲಿ ಎಲ್ಲಾ ಹಲಗೆ ತೆರೆಯಲಾಗಿದ್ದರೂ 8 ಮೀ. ಎತ್ತರಕ್ಕೆ ರಭಸವಾಗಿ ನೆರೆ ನೀರು ಉಕ್ಕಿ ಹರಿಯುತ್ತಿರುವ ದೃಶ್ಯ ಕಂಡು ಬಂದಿದೆ.

By suddi9

Leave a Reply

Your email address will not be published. Required fields are marked *