ಮೂಡುಬಿದಿರೆ:ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗೂ ಕಡಂದಲೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಫ್ರೌಡ ಶಾಲೆ ಇದರ ಅಶ್ರಯದಲ್ಲಿ ಮೂಡುಬಿದಿರೆ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟವು ಸುಬ್ರಹ್ಮಣ್ಯಸ್ವಾಮಿ ಫ್ರೌಡ ಶಾಲಾ ಮೈದಾನದಲ್ಲಿ ಆ.23 ಗುರುವಾರದಂದು ನಡೆಯಿತು.

ಈ ಪಮದ್ಯಾಟವು ಕಡಂದಲೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಫ್ರೌಡ ಶಾಲಾ ಸಂಚಾಲಕ ಸುದರ್ಶನ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಮೂಡುಬಿದಿರೆ ತಾಲೂಕು ದೈಹಿಕ ಶಿಕ್ಷಣ ಪರಿವಿಕ್ಷಣಾಧಿಕಾರಿ ಶಿವಾನಂದÀ ಕಾಯ್ಕಿಣಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಪಂದ್ಯಾಟಕ್ಕೆ ಚಾಲನೆ ನೀಡಿದರು.
ದ.ಕ. ಜಿಲ್ಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸುಚರಿತ ಶೆಟ್ಟಿ ಮುಖ್ಯ ಅತಿಥಿ ಯಾಗಿ ಮಾತನಾಡಿ, ಗ್ರಾಮೀಣಾ ಭಾಗದ ವಿದ್ಯಾರ್ಥಿಗಳಿಗೆ ತಮ್ಮಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಹೊರ ಹಾಕಲು ಇದೊಂದು ಸೂಕ್ತ ವೇದಿಕೆಯಾಗಿದೆ.ಪಠ್ಯದ ಜೊತೆ ಕ್ರೀಡೆÀಗಳಲ್ಲಿ ಮಕ್ಕಳು ಆಸಕ್ತಿವಹಿಸಿದರೆ ಮುಂದಿನ ಭವಿಷ್ಯದಲ್ಲಿ ಯಶಸ್ಸನ್ನು ಖಂಡಿತ ಪಡೆಯಲು ಸಾಧ್ಯವಿದೆ ಎಂದರು.ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದು ಕ್ರೀಡಾಳುಗಳಿಗೆ ಶುಭ ಹಾರೈಸಿದರು.
ತಾಲೂಕು ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಪ್ರಶಾಂತ್ ಜೈನ್, ನಿವ್ರತ್ತ ಶಿಕ್ಷಕ ಜಯಶೀಲ ಭಟ್,ಮುಂಡ್ಕೂರು ವಿದ್ಯಾವರ್ದಕ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರಕಾಶ್ ನಾಯ್ಕ್, ಹಂಡೇಲು ಕ್ಲಸ್ಟರ್ನ ಸಿಅರ್ಪಿ ಸರೋಜ ಬಾಯಿ, ಸಾಲಾ ಅಡಳಿತ ಮಂಡಳಿಯ ಸದಸ್ಯರಾದ ಪ್ರಸಾದ್ ಶೆಟ್ಟಿ ವೆಂಕಟೇಶ್ ಭಟ್, ಸುಧಾಕರ ಅಂಚನ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುರೇಂದ್ರ ಭಟ್, ಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಲೀಲಾ,ಮತಿತ್ತರರು ಉಪಸ್ಥಿತರಿದ್ದರು
ಕಬಡ್ಡಿ ಪಂದ್ಯಾಟದಲ್ಲಿ 14 ಪ್ರಾಥಮಿಕ ಶಾಲಾ ತಂಡ ಹಾಗೂ 14 ಪ್ರೌಢಶಾಲೆಯ ತಂಡಗಳು ಭಾಗವಹಿಸಿವೆ.
ಶ್ರೀ ಸುಬ್ರಹ್ಮಣ್ಯಸ್ವಾಮಿ ಫ್ರೌಡ ಶಾಲೆಯ ಮುಖ್ಯ ಶಿಕ್ಷಕ ಸುಧಾಕರ ಬಿ ಸ್ವಾಗತಿಸಿ ಶಿಕ್ಷಕ ದಿನಕರ ಕುಂಭಾಸಿ ನಿರೂಪಿಸಿ ಸುಧಾಕರ ಪೊಸ್ರಾಲು ವಂದಿಸಿದರು.