ಮೂಡುಬಿದಿರೆ: ದ.ಕ. ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ, ದ.ಕ. ಜಿ.ಪಂ. ಸ್ವಚ್ಛ ಭಾರತ್ ಮಿಷನ್ ಹಾಗೂ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳುವಾಯಿ ಮೈನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಳುವಾಯಿ ಮೈನ್ ಶಾಲೆಯಲ್ಲಿ ತಾಲೂಕು ಮಟ್ಟದ 2018-19ರ ಸಾಲಿನ ಪ್ರಾಥಮಿಕ ಹಾಗೂ ಪ್ರೌಢಶಾಲಾ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಳ್ವಾಸ್ ಆಂಗ್ಲ ಮಾಧ್ಯಮ ಹಾಗೂ ಕನ್ನಡ ಮಾಧ್ಯಮ ಶಾಲೆಗಳು 50 ಗರಿಷ್ಠ ಪ್ರಶಸ್ತಿ ಪಡೆದು ಸಾಧನೆ ಮಾಡಿವೆ.

DSC_3678

ಆಳ್ವಾಸ್ ವಿದ್ಯಾರ್ಥಿಗಳು ವೈಯಕ್ತಿಕ ವಿಭಾಗದಲ್ಲಿ 24 ಪ್ರಥಮ, 8 ದ್ವಿತೀಯ ಹಾಗೂ 5 ತೃತೀಯ ಸ್ಥಾನವನ್ನು, ಗುಂಪು ವಿಭಾಗದಲ್ಲಿ 6 ಪ್ರಥಮ, 4 ದ್ವಿತೀಯ, 3 ತೃತೀಯ ಸ್ಥಾನಗಳನ್ನು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ. ಧಾರ್ಮಿಕ ಪಠನ(ಅರೆಬಿಕ್), ಚಿತ್ರಕಲೆ, ಯಕ್ಷಗಾನ, ಅಶುಭಾಷಣ, ಭಕ್ತಗೀತೆ, ಲಘುಸಂಗೀತ,ಭಾವಗೀತೆ, ತಮಿಳು ಪಠನ, ಯಕ್ಷಗಾನ (ವೈಯಕ್ತಿಕ) ಇಂಗ್ಲೀಷ್ ಭಾಷಣ, ಉರ್ದು ಭಾಷಣ, ತೆಲುಗು ಭಾಷಣ, ತಮಿಳು ಭಾಷಣ, ತುಳು ಭಾಷಣ, ಕೊಂಕಣಿ ಭಾಷಣ, ವೈಯಕ್ತಿಕ ಛದ್ಮವೇಷ, ಮಿಮಿಕ್ರಿ, ಗಝಲ್, ಹಿಂದಿ ಭಾಷಣ, ಸಂಸ್ಕøತ ಭಾಷಣ, ಮರಾಠಿ ಭಾಷಣ, ರಂಗೋಲಿ, ಭಾವಗೀತೆ, ಮರಾಠಿ ಪಠನ, ನಟನ ಸಂಗೀತಾದಲ್ಲಿ ಪ್ರಥಮ ಸ್ಥಾನ, ಯಕ್ಷಗಾನ ವೈಯಕ್ತಿಕ, ಭರತನಾಟ್ಯ, ಕನ್ನಡ ಭಾಷಣ, ಅಶುಭಾಷಣ, ಜನಪದ ನೃತ್ಯ, ಸಂಸ್ಕøತ ಧಾರ್ಮಿಕ ಪಠಣ, ಸಂಸ್ಕøತ ಪಠಣ, ಚಿತ್ರಕಲೆಯಲ್ಲಿ ದ್ವಿತೀಯ ಸ್ಥಾನ, ತೆಲುಗು ಪಠಣ, ಅರಬಿಕ್ ಪಠಣ, ಉರ್ದು ಪಠಣ, ಧಾರ್ಮಿಕ ಪಠಣ ಉರ್ದು ಸ್ಪರ್ಧೆಗಳಲ್ಲಿ ತೃತೀಯ ಸ್ಥಾನವನ್ನು ಆಳ್ವಾಸ್ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

By suddi9

Leave a Reply

Your email address will not be published. Required fields are marked *