ಬಂಟ್ವಾಳ: ಸಾರ್ವಜನಿಕ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ, ರೋಟರಿ ಕ್ಲಬ್ ಬಂಟ್ವಾಳ ಮತ್ತು ರೋಟರಿ ಕ್ಲಬ್ ಲೊರೆಟ್ಟೊ ಹಿಲ್ಸ್ , ಲೊರೆಟ್ಟೊ ಇವರ ಸಂಯುಕ್ತ ಆಶ್ರಯದಲ್ಲಿ ಸಮಗ್ರ ಶಿಕ್ಷಣ ಅಭಿಯಾನ ಕಾರ್ಯಕ್ರಮ ದಡಿಯಲ್ಲಿ ವಿಶೇಷ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ 2018 -19 ಕಾರ್ಯಕ್ರಮವು ಬಂಟ್ವಾಳ ದ ರೋಟರಿ ಕ್ಲಬ್ನಲ್ಲಿ ನಡೆಯಿತು.
ಕಾರ್ಯಕ್ರಮ ವನ್ನು ಮಂಜುನಾಥ ಆಚಾರ್ಯ ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು, ವಿಶೇಷ ಮಕ್ಕಳು ಸಮಾಜದಲ್ಲಿ ಇತರ ಮಕ್ಕಳಂತೆ ಬೆಳೆಯುವ ಹಾಗೂ ಬೆರೆಯುವ ಎಲ್ಲಾ ಅವಕಾಶಗಳನ್ನು ಇಲಾಖೆಯ ಜೊತೆಗೆ ಸಂಘಸಂಸ್ಥೆಗಳ ಸಹಕಾರ ನೀಡಲು ಎಂದಿಗೂ ಹಿಂಜರಿದಿಲ್ಲ. ಇಂತಹ ಮಕ್ಕಳಲ್ಲಿ ವಿಶೇಷತೆಗಳಿವೆ ಹಾಗಾಗಿ ಇಂತಹ ಅನೇಕ ಮಕ್ಕಳು ಬೇರೆಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ , ಇನ್ನು ಅವರಿಗೆ ಸಾಧನೆ ಮಾಡಲು ಧೈರ್ಯ ತುಂಬುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ದ ಅದ್ಯಕ್ಷ ತೆ ವಹಿಸಿ ಮಾತನಾಡಿದ ತಾ.ಪಂ.ಅದ್ಯಕ್ಷ ಚಂದ್ರಹಾಸ ಕರ್ಕೇರ, ಕುಂದುಕೊರತೆಗಳನ್ನು ಪರಿಶೀಲಿಸಿ ಅವರಿಗೆ ಅಗತ್ಯವಾದ ವ್ಯವಸ್ಥೆ ಗಳನ್ನು ಕಲ್ಪಿಸುವ ಕೆಲಸ ಇಲಾಖೆ ಯಿಂದ ಸಂಘಸಂಸ್ಥೆಗಳು ಮೂಲಕ ಆಗಬೇಕಾಗಿದೆ. ನ್ಯೂನತೆಗಳನ್ನು ಗಮನಿಸಿ ಅವರಿಗೆ ಜೀವನದಲ್ಲಿ ಶಕ್ತಿ ತುಂಬುವ ಕೆಲಸದ ಜೊತೆ ಇಂತಹ ವೈದ್ಯಕೀಯ ಕಾರ್ಯಕ್ರಮ ಗಳನ್ನು ಆಯೋಜಿಸು ವ. ದುರ್ಬಲ ವರ್ಗ ದ ಜನರಿಗೆ ಸಹಾಯ ಮಾಡಲು ಎಲ್ಲರೂ ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮನಾಥ ರೈ ಮೇನಾವು ಮಾತನಾಡಿ, ಮಕ್ಕಳ ಲ್ಲಿ ರುವ ಪ್ರತಿಭೆಯನ್ನು ಗುರುತಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕಾಗಿದೆ ಎಂದರು.
ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನ ಅಧ್ಯಕ್ಷ ಅವಿಲ್ ಮಿನೇಜಸ್ ಮಾತನಾಡಿ, ವಿಶೇಷ ಮಕ್ಕಳ ಕಡೆಗಣನೆ ಸಲ್ಲದು ಎಂದರು. ರೋಟರಿ ಲೊರೆಟ್ಟೋ ಹಿಲ್ಸ್ ನ ನಿಕಟ ಪೂರ್ವ ಕಾರ್ಯದರ್ಶಿ ಪ್ರಭಾಕರ ಪ್ರಭು ಮಾತನಾಡಿ ವಿಶೇಷ ಮಕ್ಕಳ ನ್ನು ಮುಖ್ಯವಾಹಿನಿ ಗೆ ತರುವಲ್ಲಿ ಸಮಾಜದ ಪಾತ್ರ ಬಹಳ ಪ್ರಮುಖವಾಗಿದೆ.
ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ ಮಾತನಾಡಿ, ಇಂತಹ ಸಂದರ್ಭಗಳಲ್ಲಿ ಅನುಕಂಪ ತೋರಿಸುವ ಬದಲು ಅವರಿಗೆ ಧೈರ್ಯ ಹಾಗೂ ಸ್ಪೂರ್ತಿ ತುಂಬುವ ಕೆಲಸ ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಕಾರ್ಯದರ್ಶಿ ವಸಂತ್ ರಾವ್ , ಡಿ.ಐ.ಇ.ಆರ್.ಟಿ. ಮೇನುಕಾದೇವಿ, ಸಮನ್ವಯ ಅಧಿಕಾರಿ ರಾದಾಕ್ರಷ್ಣ ಭಟ್ , ಡಿ.ಡಿ.ಆರ್.ಸಿ.ಯ ನೋಡೆಲ್ ಅಧಿಕಾರಿ ಸುಬ್ರಮಣಿ, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನ ಸದಸ್ಯ ರಾದ ಆಂಟನಿ ಸ್ವಿಕೇರ, ಪ್ರಿತಾ ಸ್ವಿಕೇರ, ಸುರೇಶ್ ಶೆಟ್ಟಿ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಮನ್ವಯ ಆಧಿಕಾರಿ ರಾಧಾಕ್ರಷ್ಣ ಭಟ್ ಸ್ವಾಗತಿಸಿದರು. ತಾಲೂಕಿನ ವಿಶೇಷ ಮಕ್ಕಳ ನೊಡೆಲ್ ಅಧಿಕಾರಿ ಸುರೇಖಾ ನಿರೂಪಿಸಿದರು. ರಾಮಚಂದ್ರ ಶೆಟ್ಟಿಗಾರ್ ವಂದಿಸಿದರು.
