ಬಂಟ್ವಾಳ: ಇಲ್ಲಿನ ಕೊಯಿಲ ಗ್ರಾಮ ಕಂಬಳದಡ್ಡ ಸಮೀಪದ ದೇರಾಜೆ ಎಂಬಲ್ಲಿ ಗುರುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಹಟ್ಟಿಯೊಂದು ಸಂಪೂರ್ಣ ಕುಸಿದು ಬಿದ್ದಿದೆ.

ಇಲ್ಲಿನ ನಿವಾಸಿ ಸೆಲ್ವಿಸ್ಟರ್ ವೇಗಸ್ ಎಂಬವರ ಮನೆ ಹಿಂಬದಿ ಇರುವ ಹಟ್ಟಿಯಲ್ಲಿ ಶುಕ್ರವಾರ ಮುಂಜಾನೆ ಭಾರೀ ಸದ್ದು ಕೇಳಿದೆ. ತಕ್ಷಣವೇ ಎದ್ದು ನೋಡಿದಾಗ ಹಟ್ಟಿ ಗೋಟಡೆ ಮತ್ತು ಮಾಡು ಸಹಿತ ಸಂಪೂರ್ಣ ಕುಸಿದು ಬಿದ್ದು ಹಟ್ಟಿಯಲ್ಲಿದ್ದ ಐದು ಜಾನುವಾರುಗಳು ಪ್ರಾಣಾಪಾಯದಿಂದ ಪಾರಾಗಿ ಹಟ್ಟಿಯಿಂದ ಹೊರಗೆ ಬಂದಿದೆ.
ರಾಯಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ಗ್ರಾಮಕರಣಿಕ ಪರೀಕ್ಷಿತ್, ಸಹಾಯಕ ರಮೇಶ ಹೊಕ್ಕಾಡಿಗೋಳಿ ಮತ್ತಿತರರು ಶುಕ್ರವಾರ ತೆರಳಿ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ.