ಮೂಡುಬಿದಿರೆ: ನಾವು ಪ್ರತಿಯೊಂದು ಸವಾಲುಗಳನ್ನು ಎದುರಿಸಿದಾಗ ಜೀವನದಲ್ಲಿ ನಿರ್ದಿಷ್ಟವಾದ ಅನುಭವ ಲಭ್ಯವಾಗುತ್ತದೆ. ಆ ಅನುಭವದಿಂದ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು.
ಆಳ್ವಾಸ್ ಕಾಲೇಜ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ನ ವತಿಯಿಂದ ಆಯೋಜಿಸಲಾಗಿದ್ದ “ಜ್ಞಾನಪತಿ 2018” ರಸಪ್ರಶ್ನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ವಿಭಿನ್ನವಾದ ಪ್ರತಿಭೆಯಿದ್ದು, ಸರಿಯಾದ ವೇದಿಕೆಯ ಅವಶ್ಯಕತೆಯಿದೆ. ಅಂತಹ ವೇದಿಕೆ ದೊರೆತಾಗ ತಮ್ಮಲ್ಲಿರುವ ಸಾಮಥ್ರ್ಯವನ್ನು ಬಳಸಿಕೊಂಡು ಸರ್ವತೋಮುಖ ಬೆಳವಣಿಗೆ ಹೊಂದಬಹುದು ಎಂದು ತಿಳಿಸಿದರು.
ರಸಪ್ರಶ್ನೆಯ ಕ್ವಿಜ್ ಮಾಸ್ಟರ್ ಹಾಗೂ ಆಳ್ವಾಸ್ ನರ್ಸಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕರಾದ ಧೀರೆಂದ್ರ ಜೈನ್ ಮಾತನಾಡಿ, ಯಾವುದೇ ವಿಚಾರದ ಕುರಿತು ಆಸಕ್ತಿಯಿದ್ದಾಗ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿ ಅರ್ಥವಾಗುತ್ತದೆ. ಆದ್ದರಿಂದ ಜೀವನದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಪ್ರತಿಯೊಂದು ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ರಸಪ್ರಶ್ನೆಯಲ್ಲಿ ದ್ವಿತೀಯ ಬಿಎನ್ವೈಎಸ್ನ ಐಶ್ವರ್ಯ ಎಂ ಹಾಗೂ ಅಮೃತಾ ತಂಡ ವಿಜೇತರಾಗಿ ರೂ.5000 ನಗದು ಬಹುಮಾನವನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ವನಿತಾ ಎಸ್. ಶೆಟ್ಟಿ, ಇಸ್ರೋ ಆಂಟಿಕ್ಸ್ ಕಾರ್ಪೋರೇಷನ್ನ ಡೆಪ್ಯೂಟಿ ಮ್ಯಾನೇಜರ್ ಭಾರ್ಗವ್ ಅಡ್ಡಗುಳ್ಳ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪ್ರವಲಿಕಾ ಕಾರ್ಯಕ್ರಮ ನಿರೂಪಿಸಿದರು.
ರಸಪ್ರಶ್ನೆ ಸ್ಪರ್ಧೆಯ ವಿವರ:
ಜ್ಞಾನಪತಿ 2018ನ ಪ್ರಥಮ ಸುತ್ತಿನ ಆಯ್ಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ 23 ತಂಡಗಳು ಭಾಗವಹಿಸಿದ್ದವು. ಲಿಖಿತ ಪರೀಕ್ಷೆಯ ಮೂಲಕ 6 ತಂಡಗಳನ್ನು ಮುಂದಿನ ಸುತ್ತಿಗೆ ಆಯ್ಕೆ ಮಾಡಲಾಯಿತು. ಈ ಸ್ಪರ್ಧೆಯನ್ನು ಕೋಟ್ಯಾಧಿಪತಿ ಮಾದರಿಯಲ್ಲಿ ಫಾಸ್ಟೆಸ್ಟ್ ಫಿಂಗರ್ ವಿಧಾನದ ಮೂಲಕ ಸ್ಪರ್ಧಿಗಳನ್ನು ಹಾಟ್ ಸೀಟ್ಗೆ ಆಯ್ಕೆ ಮಾಡಲಾಯಿತು. ಸ್ಪರ್ಧಾಳುಗಳಿಗೆ 50-50, ಆಡಿಯನ್ಸ್ ಪೋಲ್, ಫೋನ್ ಸ್ನೇಹಿತ ಎಂಬ 3 ಸಹಾಯವಾಣಿಗಳಿದ್ದವು. ದ್ವಿತೀಯ ಬಿಎನ್ವೈಎಸ್ನ ಐಶ್ವರ್ಯ ಎಂ ಹಾಗೂ ಅಮೃತಾ ತಂಡ ವಿಜೇತರಾಗಿ ರೂ.5000 ನಗದು ಬಹುಮಾನವನ್ನು ಪಡೆದುಕೊಂಡರು.
