ಬಂಟ್ವಾಳ: ರಾಷ್ಟ್ರೀಯ ಸೇವಾ ಯೋಜನೆ ಮೂಲಕ ನಗರ ಮತ್ತು ಗ್ರಾಮೀಣ ವಿದ್ಯಾರ್ಥಿಗಳು ಒಟ್ಟಾಗಿ ಶ್ರಮದಾನ ಮತ್ತಿತರ ಚಟುವಟಿಕೆ ನಡೆಸುವುದರಿಂದ ಅವರಲ್ಲಿ ಶಿಸ್ತುಬದ್ಧ ಜೀವನ ನಡೆಸಲು ಸೌಹಾರ್ದತೆ ಮತ್ತು ನೈಜ ಬದುಕಿನ ಪಾಠ ಲಭ್ಯವಾಗುತ್ತದೆ ಎಂದು ಬಂಟ್ವಾಳ ಎಸ್ವಿಎಸ್ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಪಾಂಡುರಂಗ ನಾಯಕ್ ಹೇಳಿದ್ದಾರೆ.
ಇಲ್ಲಿನ ಕೊಯಿಲ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ವಿಎಸ್ ಪದವಿಪೂರ್ವ ಕಾಲೇಜಿನ ಎನ್ಎಸ್ಎಸ್ ಘಟಕ ವತಿಯಿಂದ ಮಂಗಳವಾರ ನಡೆದ ವಾರ್ಷಿಕ ವಿಶೇಷ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.

ರ ಸಮಾರೋಪ ಕಾರ್ಯಕ್ರಮ ಪ್ರಯುಕ್ತ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಂ.ದುರ್ಗಾದಾಸ ಶೆಟ್ಟಿ ಮಾವಂತೂರು ಇವರು ಹಣ್ಣಿನ ಗಿಡ ನೆಟ್ಟರು.
ಎಸ್ವಿಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಶಿಕಲಾ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೊಯಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ವೇದಾನಂದ ಕಾರಂತ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಸಂಸ್ಕಾರಯುತ ಜೀವನಕ್ಕೆ ಬಾಲ್ಯದಿಂದಲೇ ಮಾರ್ಗದರ್ಶನ ಸಿಗಬೇಕು ಎಂದರು.

ಇದೇ ವೇಳೆ ವಿವಿಧ ಸ್ಪರ್ಧಾ ವಿಜೇತ ಶಿಬಿರಾರ್ಥಿಗಳಿಗೆ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಎಂ.ದುರ್ಗಾದಾಸ ಶೆಟ್ಟಿ ಮಾವಂತೂರು ಬಹುಮಾನ ವಿತರಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಕೊಯಿಲ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ರಮೇಶ ಮಯ್ಯ, ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ, ಗ್ರಾಮ ಪಂಚಾಯಿತಿ ಹಿರಿಯ ಸದಸ್ಯ ದೇವಪ್ಪ ಕರ್ಕೇರ ನೆಕ್ಕರೆಗುಳಿ, ಮಾಜಿ ಅಧ್ಯಕ್ಷರಾದ ಹರೀಶ ಆಚಾರ್ಯ ಮತ್ತು ಜಿ.ದಾಮೋದರ ಬಂಗೇರ, ಪ್ರಮುಖರಾದ ಗಂಗಾಧರ ಪೂಜಾರಿ ಪಿಲ್ಕಾಜೆ ಮತ್ತಿತರರು ಶುಭ ಹಾರೈಸಿದರು.
ಘಟಕ ನಾಯಕ ರಕ್ಷಿತ್, ನಾಯಕಿ ಚೈತ್ರಾ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕಿ ಭಾರತಿ ಅಣ್ಣಳಿಕೆ ಸ್ವಾಗತಿಸಿದರು. ಶಿಬಿರಾಧಿಕಾರಿ ಕವಿತಾ ಯಾದವ್ ಪ್ರಾಸ್ತಾವಿಕ ಮಾತನಾಡಿ, ವಂದಿಸಿದರು. ಉಪನ್ಯಾಸಕಿ ಪ್ರಭಾವತಿ ಕಾರ್ಯಕ್ರಮ ನಿರೂಪಿಸಿದರು.