ಮುಂಬೈ: ಲವ್ ಜಿಹಾದ್ ಕುರಿತು ಗಂಭೀರವಾದ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕ ಮತ್ತು ಶಾಸಕ ಯೋಗಿ ಆದಿತ್ಯನಾಥ್  ಅವರಿಗೆ ಮತ್ತೊಬ್ಬ ಫೈರ್‌ಭ್ರ್ಯಾಂಡ್ ನಾಯಕ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರ ಬೆಂಬಲ ಲಭಿಸಿದೆ. 

lv jhad

ಶಿವಸೇನಾದ  ಮುಖವಾಣಿ ಸಾಮ್ನಾದ ಸಂಪಾದಕೀಯ ವಿಭಾಗದಲ್ಲಿ ಈ ವಿಷಯ ಪ್ರಸ್ತಾಪಿಸಿರುವ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ “ಹಿಂದು ಹುಡುಗಿಯರನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ ಮದುವೆ ಮಾಡಿಕೊಂಡು ನಂತರ ಅವರನ್ನು ಬಲವಂತವಾಗಿ   ಮತಾಂತರ ಮಾಡಲಾಗುತ್ತದೆ ಎಂದಿದ್ದಾರೆ.
ಯೋಗಿ ಆದಿತ್ಯನಾಥ್‌ರ ಇತ್ತೀಚಿನ ಹೇಳಿಕೆ ಮತ್ತು ಈ ವಿಷಯದಲ್ಲಿ ಆರ್‌ಎಸ್ಎಸ್  ನಾಯಕ ಮೋಹನ್ ಭಾಗ್ವತ್ ಅವರ  ದೃಷ್ಟಿಕೋನವನ್ನು ಅನುಮೋದಿಸಿರುವ ಠಾಕ್ರೆ” ಲವ್ ಜಿಹಾದ್ ಹಿಂದು ಸಂಸ್ಕೃತಿಯನ್ನು ನಾಶಪಡಿಸಲು ಕೈಗೊಂಡಿರುವ  ಅಂತರಾಷ್ಟ್ರೀಯ ಪಿತೂರಿ  ಎಂದು ಅಭಿಪ್ರಾಯ ಪಟ್ಟಿದ್ದಾರೆ.
 1 ಹಿಂದು ಹುಡುಗಿಯನ್ನು ಮತಾಂತರಿಸಿದರೆ, ಪ್ರತಿಯಾಗಿ 100 ಮುಸ್ಲಿಂ ಯುವತಿಯರ ಧರ್ಮ ಪರಿವರ್ತನೆ ಮಾಡುತ್ತೇವೆ ಎಂದು ಯೋಗಿ ಆದಿತ್ಯನಾಥ್ ಹೇಳುತ್ತಿದ್ದ ದಿನಾಂಕವಿಲ್ಲದ ವಿಡಿಯೋ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಲವ್ ಜಿಹಾದ್ ಎದುರಿಸಲು ಲವ್ ತ್ರಿಶೂಲ್: ಶಿವಸೇನಾ ಪ್ರತಿ ತಂತ್ರ

ಲವ್ ಜಿಹಾದ್ ಹತ್ತಿಕ್ಕಲು ತಮ್ಮ ಪಕ್ಷ ಲವ್ ತ್ರಿಶೂಲ್ ಹುಟ್ಟು ಹಾಕಲಿದೆ ಎಂದು ಉತ್ತರ ಪ್ರದೇಶದ ಶಿವಸೇನಾ ನಾಯಕ  ಅನಿಲ್ ಸಿಂಗ್ ತಿಳಿಸಿದ್ದಾರೆ. 

ಪ್ರತಿ ಬಾರಿ ಲವ್ ಜಿಹಾದ್ ಪ್ರಕರಣ ವರದಿಯಾದಾಗ ಮಧ್ಯಸ್ಥಿಕೆ ವಹಿಸಲು ಲವ್ ತ್ರಿಶೂಲ್ ಸದಸ್ಯರು ತತ್ಪರರಿರಲಿದ್ದಾರೆ .ಮೊದಲು ರಾಯ್ ಬರೇಲಿ ನಗರದಲ್ಲಿ ಅಸ್ತಿತ್ವಕ್ಕೆ ಬರಲಿರುವ ಲವ್ ತ್ರಿಶೂಲ್  ನಂತರ  ರಾಜ್ಯಾದ್ಯಂತ ಹರಡಲಿದೆ. ಈ ಮೂಲಕ ಪ್ರೇಮ ಸಂಬಂಧಗಳಲ್ಲಿ ಸಿಕ್ಕಿಹಾಕಿಕೊಂಡು ನಂತರ ಮತಾಂತರದ ಗಂಡಾಂತರವನ್ನೆದುರಿಸುವ ಯುವ ಹಿಂದೂ ಯುವತಿಯರನ್ನು ಉಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
2009ರಲ್ಲಿ ಕೇರಳ ಮತ್ತು ಕರ್ನಾಟಕಗಳಲ್ಲಿ ಬಲಾತ್ಕಾರದ ಮತಾಂತರ ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗತೊಡಗಿದಾಗ ಲವ್ ಜಿಹಾದ್ ಎಂಬ ಪರಿಭಾಷೆ ಹುಟ್ಟಿಕೊಂಡಿತು.  ಆನಂತರ ದೇಶದ ಉಳಿದ ರಾಜ್ಯಗಳಲ್ಲೂ  ಬಲವಂತದ ಮತಾಂತರ ಪ್ರಕರಣಗಳು  ವರದಿಯಾಗತೊಡಗಿದವು. ಇತ್ತೀಚಿಗೆ ಜಾರ್ಖಂಡ್‌ನಲ್ಲಿ ರಾಷ್ಟ್ರೀಯ ಮಟ್ಟದ  ಶೂಟರ್  ತಾರಾ ಸಹದೇವ್ ಅವರ ಮತಾಂತರ ಯತ್ನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಶಿವಸೇನೆ ಲವ್ ಜಿಹಾದ್ ತಡೆಯುವ ಸಂಕಲ್ಪದೊಂದಿಗೆ ಈ ಹೆಜ್ಜೆ ಇಡುತ್ತಿದೆ.
ಈ ಕುರಿತು ರಾಷ್ಟ್ರೀಯ ಸುದ್ದಿ ಪತ್ರಿಕೆಯೊಂದರ ಜತೆ ಮಾತನಾಡುತ್ತಿದ್ದ  ಅನಿಲ್ ಸಿಂಗ್  ಇಸ್ಲಾಂ ಸಂಘಟನೆಗಳು  ತಮ್ಮ ಧರ್ಮ ಪ್ರಚಾರ ಮಾಡಲು ಈ ಹಾದಿಯನ್ನು ತುಳಿದಿವೆ. ಇದು ಹಿಂದು ಧರ್ಮಕ್ಕೆ ಎದುರಾಗಿರುವ ಹೊಸ ಸವಾಲಾಗಿದೆ.  ಲವ್ ತ್ರಿಶೂಲ್ ಎಲ್ಲ ರೀತಿಯ ಹಿಂದು ವಿರೋಧಿ ಕೃತ್ಯಗಳಿಗೆ ಬ್ರಹ್ಮಾಸ್ತ್ರವಾಗಿ ಪರಿಣಮಿಸಲಿದೆ. ಇದು  ಇಸ್ಲಾಂ ಸಂಸ್ಥೆಗಳಿಂದ ಯುವ ಜನಾಂಗಕ್ಕೆ ಎದುರಾಗುವ  ಅಪಾಯಗಳಿಂದ  ರಕ್ಷಣೆ ಒದಗಿಸಲಿದೆ ಎಂದು ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *