ಮೂಡುಬಿದಿರೆ: ಮೂಡಬಿದಿರೆ ತಾಲೂಕಿನ ಪೂರ್ವ ಗಡಿ ಪ್ರದೇಶವಾದ ಶಿರ್ತಾಡಿಯ ಕಜೆ ಮತ್ತು ಬೆಳ್ತಂಗಡಿ ತಾಲೂಕಿನ ಪಶ್ಚಿಮ ಗಡಿ ಭಾಗದ ಹೊಸಂಗಡಿಯನ್ನು ಅತಿ ಸಮೀಪದಲ್ಲಿ ಸಂಪರ್ಕ ಕಲ್ಪಿಸುವ ಕಜೆ-ಹೊಸಂಗಡಿ ಸೇತುವೆಯನ್ನು ಕೇಂದ್ರ ರಸ್ತೆ ನಿಧಿ (ಸಿಆರ್‍ಎಫ್)ಯಿಂದ ನಿರ್ಮಿಸಲು ಈಗಾಗಲೇ ಟೆಂಡರ್ ಆಗಿದ್ದು ಮಳೆಗಾಲದ ಬಳಿಕ ಕಾಮಗಾರಿ ಪ್ರಾರಂಭವಾಗಲಿದ್ದು ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ನಳಿನ್‍ಕುಮಾರ್ ಹೇಳಿದರು.

ಕೇಂದ್ರ ರಸ್ತೆ ನಿಧಿಯಿಂದ ಮಂಜೂರಾದ ರೂ. 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ, ಕಜೆ ಮತ್ತು ಹೊಸಂಗಡಿಯನ್ನು ಒಗ್ಗೂಡಿಸುವ ಗುಂಡಡಪ್ಪು ಸೇತುವೆ ಕಾಮಗಾರಿ ತಾಣವನ್ನು ಸಂಸದ ನಳಿನ್ ಕುಮಾರ್ ಅವರು ಸೋಮವಾರ ವೀಕ್ಷಿಸಿದರು.
ಈ ಸಂದಭರ್ಬದಲ್ಲಿ ಶಾಸಕ ಉಮಾನಾಥ ಕೋಟ್ಯಾನ್, ಜಿ.ಪಂ. ಸದಸ್ಯೆ ಸುಜಾತ ಕೆ.ಪಿ., ತಾ.ಪಂ. ಸದಸ್ಯೆ ನಾಗವೇಣಿ, ಶಿರ್ತಾಡಿ ಪಂಚಾಯತ್ ಅಧ್ಯಕ್ಷೆ ಲತಾ ಹೆಗ್ಡೆ, ಬೆಳುವಾಯಿ ಗ್ರಾ.ಪಂ. ಅಧ್ಯಕ್ಷ ಭಾಸ್ಕರ ಆಚಾರ್ಯ, ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷ ಶ್ರೀನಾಥ್ ಸುವರ್ಣ, ನೆಲ್ಲಿಕಾರು ಗ್ರಾ.ಪಂ. ಮಾಜಿ ಅಧ್ಯಕ್ಷ ಹರೀಶ್ ಆಚಾರ್ಯ, ಕಂದೀರು ಕ್ಷೇತ್ರದ ಸೋಮನಾಥ ಶಾಂತಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ ಅಧಿಕಾರಿ, ಮಂಡಲಾಧ್ಯಕ್ಷ ಈಶ್ವರ ಕಟೀಲು,ಪ್ರ, ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮುಖಂಡರಾದ ಮೇಘನಾದ್ ಶೆಟ್ಟಿ , ಜಯಂತ ಹೆಗ್ಡೆ ಮೊದಲಾದವರು ಇದ್ದರು.