ಮಂಗಳೂರು: ಕಂದಾಯ ಇಲಾಖೆ ಉದ್ಯೋಗಿ ಮಂಗಳೂರು ಉಪವಿಭಾಗದ ಸಹಾಯಕ ಕಮೀಷನ್ ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾರನಾಥ.ಜಿ.ಎಸ್.ಬೋಳಾರ ಇವರು ಮಂಗಳ ಕ್ರೀಡಾಂಗಣದಲ್ಲಿ ಜರಗಿದ ಜಿಲ್ಲಾ ಮಟ್ಟದ 62ಕೆಜಿವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ರಾಜ್ಯ ಮಟ್ಟದ ಸಿವಿಲ್ ಸರ್ವಿಸಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ಇವರು ರಾಷ್ಟ್ರಮಟ್ಟದಲ್ಲಿ ನಡೆದ ವಿಶ್ವವಿದ್ಯಾನಿಲಯ ಕ್ರೀಡಾಕೂಟದಲ್ಲಿ ಸತತ ಮೂರು ಬಾರಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿರುವ ಇವರು ಎಸ್.ಪಿ.ಸಿ.ಐ ನ ಸದಸ್ಯ ಮಂಗಳೂರು ವಿಶ್ವಿದ್ಯಾನಿಲಯ ಶಾರೀರಿಕ ಉಪನಿರ್ದೇಶಕರಾಗಿದ್ದ ಡಾ.ಎಚ್.ನಾಗಲಿಂಗಪ್ಪ ಇವರಿಂದ ತರಬೇತಿ ಪಡೆದಿರುತ್ತಾರೆ.