ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ರೂ. 38,31,300 ಮೌಲ್ಯದ 1393.200 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿ ದ್ದಾರೆ. 
ಮೊದಲ ಪ್ರಕರಣದಲ್ಲಿ ಜೆಟ್ ಏರ್‍ವೇಸ್ ವಿಮಾನದಲ್ಲಿ ಬೆಳಿಗ್ಗೆ 7.45ರ ಹೊತ್ತಿಗೆ ಬಂದಿಳಿದ ಆರೋಪಿಯಿಂದ ರೂ. 19,51,400 ಬೆಲೆಯ 709.600 ಗ್ರಾಂ ಚಿನ್ನವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಕಾಸರಗೋಡು ಕೊಲವಯಲ್ ನಿವಾಸಿ ಅದಿರನ್ ಅದಿಯಲ್‍ಪರಂಬು ಎಂಬವರ ಮಗನಾದ ಅದಿಯಲ್‍ಪರಂಬು ಕುಞಂಬ್ದುಲ್ಲಾ ಎಂದು ಗುರುತಿಸಲಾಗಿದೆ. ಈತ ಆಟದ ಸಾಮಾನು ಮತ್ತು ಸ್ಟಿಕ್ಕರ್‍ಗಳನ್ನು ಪ್ಯಾಕ್ ಮಾಡಲಾಗಿದ್ದ ಕಾರ್ಡ್‍ಬೋರ್ಡ್ ಬಾಕ್ಸ್‍ನಲ್ಲಿ ಚಿನ್ನವನ್ನು ತೆಳುವಾದ ಹಾಳೆಯಂತೆ ಅಂಟಿಸಿ ಮತ್ತು ಬಟಾಟೆ ಚಿಪ್ಸ್‍ನ ಟಿನ್‍ನ ಒಳಗೆ ತೆಲುವಾಗಿ ಚಿನ್ನದ ಹಾಳೆಯನ್ನು ತುಂಬಿ ಸಾಗಾಟ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

gold

gold1

gold2


ಇದೇ ಮಾದರಿಯ ಮತ್ತೊಂದು ಪ್ರಕರಣದ ಆರೋಪಿಯನ್ನು ಕಾಸರಗೋಡು ಉದುಮ ನಿವಾಸಿ ಕಂಞಮ್ಮು ಏಚಿಲಿಂಗಲ್ ಕುಂಞು ಎಂಬವರ ಮಗನಾದ ಕುಂಞಮ್ಮು ಮೂಸ (32) ಎಂದು ಗುರುತಿಸಲಾಗಿದೆ. ಈತ ಕೂಡಾ ಜೆಟ್ ಏರ್‍ವೇಸ್ ವಿಮಾನದಲ್ಲಿ ಮೇಲಿನ ಮಾದರಿಯಲ್ಲೇ ಚಿನ್ನವನ್ನು ಕಳ್ಳ ಸಾಗಾಣೆ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳು ಈತನಿಂದ 683.600 ಗ್ರಾಂ ತೂಗುವ 18,79,900 ರೂ. ಮೌಲ್ಯದ ಚಿನ್ನವನ್ನು ವಶಪಟಿಸಿಕೊಂಡಿದ್ದಾರೆ. ಕಾರ್ಯಾಚರಣೆಯ ನೇತೃತ್ವವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ವಿಭಾಗದ ಸಹಾಯಕ ಅಧಿಕಾರಿ ಕೃಷ್ಣ ಕುಮಾರ್ ಪ್ರಸಾದ್ ಅವರು ವಹಿಸಿದ್ದರು. 

By suddi9

Leave a Reply

Your email address will not be published. Required fields are marked *