ಬಿಸಿರೋಡ್: ತುಡರ್ ಯಕ್ಷ ಮಿತ್ರೆರ್ ಇದರ ವತಿಯಿಂದ 6ನೇ ವರ್ಷದ ಶ್ರೀ ಅನಂತಪದ್ಮನನಾಭ ಯಕ್ಷಗಾನ ಮಂಡಳಿ ಪೆರ್ಡೂರು ಇವರಿಂದ “ಚಂದ್ರಹಾಸ-ಚಂದ್ರಾವಳಿವಿಲಾಸ” ಎಂಬ ಪೌರಾಣಿಕ ಯಕ್ಷಗಾನ ಬಯಲಾಟವು ಡಿ.22ರಂದು ಶನಿವಾರ ಬಿ.ಸಿರೋಡ್ ಸ್ಪರ್ಶಕಲಾಮಂದಿರದ ಬಯಲು ರಂಗಮಂದಿರದಲ್ಲಿ ನಡೆಯಲಿದೆ.mqdefault

ಸಭಾ ಕಾರ್ಯಕ್ರಮ ಸನ್ಮಾನ ಕಾರ್ಯಕ್ರಮ.
ಹಿರಿಯ ಯಕ್ಷಗಾನ ಕಲಾವಿದರಾದ ತೋಡಿಕಾನಬಾಬು ಗೌಡ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ನಿವೃತ ಡೆಪ್ಯೂಟಿ ಕಮಾಂಡರ್ ಬಿ.ಎಸ್.ಎಫ್ ಚಂದಪ್ಪ ಮೂಲ್ಯ, ಬಂಟ್ವಾಳ ವಿದ್ಯುತ್ ಉಪವಿಭಾಗ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ರಾವ್,ಸ್ಪರ್ಶಾ ಕಲಾಮಂದಿರದ ಮಾಲಕ ಸುಭಾಷ್ ಚಂದ್ರ ಜೈನ್, ಮಂಗಳೂರು ಮಂಗಳೂರು ದಾಸ್ ಚಾರಿಟೇಬಲ್ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಅನಿಲ್ ದಾಸ್, ಉದ್ಯಮಿ ಚಂದ್ರಹಾಸ ಪಲ್ಲಿಪಾಡಿ ಭಾಗವಹಿಸಲಿದ್ದಾರೆ ಎಂದು ತುಡರ್ ಯಕ್ಷ ಮಿತ್ರೆರ್ ಇದರ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *