ಮೂಡುಬಿದಿರೆ: ಒಂದು ಸಮುದಾಯವನ್ನು ಒಗ್ಗೂಡಿಸುವುದು ಸುಲಭವಲ್ಲ. ಇಂದಿನ ಯುವಸಮೂಹವನ್ನು ಧಾರ್ಮಿಕವಾಗಿ ಸಂಘಟಿಸುವ ಕೆಲಸ ಸಮುದಾಯದ ಸಂಘಟನೆಗಳಿಂದಾಗಬೇಕು. ಸಮಾಜದಲ್ಲಿ ನಡೆಯುವಂತಹ ಧಾರ್ಮಿಕ ಆಚರಣೆ, ಕಾರ್ಯಕ್ರಮಗಳಿಗೆ ಯುವಕರು ಕೈಜೋಡಿಸಬೇಕು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೂ ಕೂಡ ಅವಕಾಶ ನೀಡುವ ಮೂಲಕ ಯುವ ಸಂಘಟನೆಗಳು ಬದಲಾವಣೆ ತರಲಿ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ತ್ರಿಭುವನ್ ಯುವಜೈನ್ ಮಿಲನ್ ಮೂಡುಬಿದಿರೆ ಆಶ್ರಯದಲ್ಲಿ ಶ್ರೀ ಧವಲಾ ಕಾಲೇಜಿನ ಶ್ರೀಕ್ಷೇತ್ರ ಧರ್ಮಸ್ಥಳ ಮಾತೃಶ್ರೀ ರತ್ನಮ್ಮ ಸಭಾಭವನದಲ್ಲಿ ನಡೆದ `ತ್ರಿಭುವನ್ ಯುವಜನೋತ್ಸವ 2018′ ರಾಜ್ಯಮಟ್ಟದ ಸಾಂಸ್ಕøತಿಕ ಸ್ಪರ್ಧೆಯ ಉದ್ಘಾಟನಾ ಸಮಾರಮಭದಲ್ಲಿ ಆಶೀರ್ವಚನ ನೀಡಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಯುವಜನೋತ್ಸವವನ್ನು ಉದ್ಘಾಟಿಸಿದರು. ಭಾರತೀಯ ಜೈನ್ ಮಿಲನ್ ವಲಯ 8ರ ಉಪಾಧ್ಯಕ್ಷ ಪುಷ್ಪರಾಜ್ ಜೈನ್ ಸಮಾರಂಭದ ಅಧ್ಯಕ್ಷತೆವಹಿಸಿದರು.
ಮುಖ್ಯ ಅತಿಥಿಯಾಗಿ ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ್ ಎಂ., ಜೈನ್ ಮಿಲನ್ ವಲಯ 8ರ ಜಯರಾಜ ಕಂಬಳಿ, ಭಾರತೀಯ ಜೈನ್ ಮಿಲನ್ ಮೂಡುಬಿದಿರೆಯ ಅಧ್ಯಕ್ಷೆ ಶ್ವೇತಾ ಜೈನ್, ಶ್ರೀಧವಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ರವೀಶ್, ಶ್ರೀಮಹಾವೀರ ಸಂಘದ ಅಧ್ಯಕ್ಷ ಪೃಥ್ವಿರಾಜ್ ಶೆಟ್ಟಿ, ಹದಿನೆಂಟು ಬಸದಿಗಳ ಮೊಕ್ತೇಸರ ದಿನೇಶ್ ಆನಡ್ಕ, ಕಾರ್ಯಕ್ರಮದ ಪೋಷಕರಾದ ದಿವ್ಯಾ ವೀರೇಂದ್ರ ಕುಮಾರ್, ಸರ್ವಮಂಗಳಾ ಮಹಿಳಾ ಸಂಘದ ಅಧ್ಯಕ್ಷೆ ಸುಧಾ ಪೃಥ್ವಿರಾಜ್ ಭಾಗವಹಿಸಿದ್ದರು.
ಬಳಿಕ ಜಿನಭಕ್ತಿ ಗೀತೆಗಳಲ್ಲಿ ಶ್ರಾವಕರು ಉತ್ತಮ ಪ್ರದರ್ಶನ ನೀಡಲು ಮಾರ್ಗದರ್ಶನ ನೀಡಿದ ಸಂಗೀತ ಗುರು ಯಶವಂತ್ ಎಂ.ಜಿ, ರಾಷ್ಟ್ರಪ್ರಶಸ್ತಿ ಪುರಸ್ಕøತ ಪ್ರತಿಭೆ ಪಂಚಮಿ ಮಾರೂರು ಹಾಗೂ ಕರಾಟೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವ ಸುಪಾಶ್ರ್ವ ಕೊಂಬ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ತ್ರಿಭುವನ್ ಯುವಜೈನ್ ಮಿಲನ್ ಮೂಡುಬಿದಿರೆ ಅಧ್ಯಕ್ಷ ನಿತೇಶ್ ಬಲ್ಲಾಳ್, ಕಾರ್ಯದರ್ಶಿ ಶಾಂತಪ್ರಸಾದ್, ಕೋಶಾಧಿಕಾರಿ ಧೀರೇಂದ್ರ ಬಲ್ಲಾಳ್ ಸಹಿತ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಶ್ವಿತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.