ಬೆತ್ತ ಸಹಿತ ಅಹಿಂಸಾತ್ಮಕ ಕಂಬಳ : ಕೇಂದ್ರ ಸಚಿವ ಡಿ.ವಿ.ಎಸ್ ಭರವಸೆ
ಬಂಟ್ವಾಳ:ಜಿಲ್ಲೆಯಲ್ಲಿ ಕೃಷಿಕರು ತನ್ನ ಮಕ್ಕಳಂತೆ ಸಾಕಿದ ಓಟದ ಕೋಣಗಳನ್ನು ಓಡಿಸಲು ಹಿಂದಿನ ಮಾದರಿಯಲ್ಲೇ ಬೆತ್ತ ಸಹಿತ ಅಹಿಂಸಾತ್ಮಕವಾಗಿ ನಡೆಸಲು ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ಇಲ್ಲಿನ ಹೊಕ್ಕಾಡಿಗೋಳಿಯಲ್ಲಿ ಮಹಿಷ ಮರ್ಧಿನಿ ಕಂಬಳ ಸಮಿತಿ ವತಿಯಿಂದ ಶನಿವಾರ ರಾತ್ರಿ ನಡೆದ ‘ವೀರ -ವಿಕ್ರಮ’ ಜೋಡುಕರೆ ಬಯಲು ಕಂಬಳ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕರಾವಳಿ ಜಿಲ್ಲೆಯಲ್ಲಿ ಯಾವುದೇ ಜಾತಿ, ಮತ, ಧರ್ಮ ಮತ್ತು ರಾಜಕೀಯ ಬೇಧವಿಲ್ಲದೆ ಕೃಷಿಕರು ಒಟ್ಟಾಗಿ ಕಂಬಳ ಕ್ರೀಡೆ ನಡೆಸುತ್ತಿರುವ ಬಗ್ಗೆ ಏನೂ ಗೊತ್ತಿರದ ಕೆಲವೊಂದು ಮಂದಿ ಕೋರ್ಟಿಗೆ ತಪ್ಪು ಮಾಹಿತಿ ನೀಡಿ ಕಂಬಳ ಸ್ಥಗಿತಗೊಳಿಸಲು ಹವಣಿಸುತ್ತಿದ್ದಾರೆ. ಇದಕ್ಕಾಗಿ ಈಗಾಗಲೇ ಅಟಾರ್ನಿ ಜನರಲ್ ಮೂಲಕ ಅವಿರತ ಶ್ರಮ ವಹಿಸಿ ಧಾರ್ಮಿಕ ನಂಟು ಹೊಂದಿರುವ ಕಂಬಳವನ್ನು ಅಹಿಂಸಾತ್ಮಕವಾಗಿ ಮುನ್ನಡೆಸಲು ಕಂಬಳಾಸಕ್ತರ ಬೆಂಬಲ ಅಗತ್ಯವಿದೆ ಎಂದು ಅವರು ಹೇಳಿದರು.
ಇದೇ ವೇಳೆ ಕಂಬಳದ ಮಾಜಿ ಪ್ರಧಾನ ತೀರ್ಪುಗಾರ ಬೆಳ್ಳಿಪಾಡಿ ಮಂಜಯ ರೈ ಇವರನ್ನು ಸನ್ಮಾನಿಸಲಾಯಿತು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಂಬಳ ಕ್ರೀಡೆಯು ಜಿಲ್ಲೆಯ ಜನರ ಕೃಷಿ ಪದ್ಧತಿಯಿಂದ ಹಂತ ಹಂತವಾಗಿ ಬೆಳೆದು ಬಂದಿದೆ ಎಂದರು.

23btl-Hokkadigoli
ಬಂಟ್ವಾಳ ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್, ಬೆಳ್ತಂಗಡಿ ಶಾಸಕ ಹರೀಶ ಪೂಂಜ, ಮೂಡುಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಮತ್ತಿತರರು ಮಾತನಾಡಿದರು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ, ಗೌರವ ಸಲಹೆಗಾರ ಗುಣಪಾಲ ಕಡಂಬ, ಜಿಲ್ಲಾ ಕಾರ್ಯದರ್ಶಿ ರಾಜೀವ ಶೆಟ್ಟಿ ಎಡ್ತೂರು, ಮಾಜಿ ಕಾರ್ಯದರ್ಶಿ ವಿಜಯ ಕುಮಾರ್, ಪ್ರಮುಖರಾದ ಬಾರ್ಕೂರು ಶಾಂತರಾಮ ಶೆಟ್ಟಿ, ವಿನು ವಿಶ್ವನಾಥ ಶೆಟ್ಟಿ ಕರಿಂಜೆ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ತುಂಗಪ್ಪ ಬಂಗೇರ, ಬಿ.ಪದ್ಮಶೇಖರ ಜೈನ್, ಎಪಿಎಂಸಿ ಸದಸ್ಯ ಎಂ.ಪದ್ಮರಾಜ ಬಲ್ಲಾಳ್ ಮಾವಂತೂರು, ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ಅಧ್ಯಕ್ಷ ಎಂ.ದುರ್ಗಾದಾಸ್ ಶೆಟ್ಟಿ ಮಾವಂತೂರು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ವಸಂತ ಕುಮಾರ್ ಅಣ್ಣಳಿಕೆ, ಆರಂಬೋಡಿ
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಭಾಕರ ಹುಲಿಮೇರು, ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನವೀನಚಂದ್ರ ಶೆಟ್ಟಿ, ಪಂಜಿಕಲ್ಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಮತ್ತಿತರರು ಇದ್ದರು.
ಸಮಿತಿ ಗೌರÀವಾಧ್ಯಕ್ಷ ಸಂಜೀವ ಶೆಟ್ಟಿ ಗುಂಡ್ಯಾರು, ಅಧ್ಯಕ್ಷ ನೋಣಾಲುಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ, ಪದಾಧಿಕಾರಿಗಳಾದ ಬಾಬು ರಾಜೇಂದ್ರ ಶೆಟ್ಟಿ ಅಜ್ಜಾಡಿ, ಎಚ್. ಹರೀಶ್ ಹಿಂಗಾಣಿ, ಸಂದೇಶ್ ಶೆಟ್ಟಿ ಪೆÇಡುಂಬ, ಪುಷ್ಪರಾಜ ಜೈನ್ ನಡ್ಯೋಡಿ, ಹರಿಪ್ರಸಾದ್ ಶೆಟ್ಟಿ ಕುರ್ಡಾಡಿ, ರಾಜೇಶ್ ಶೆಟ್ಟಿ ಕೊನೆರೊಟ್ಟು, ಪ್ರವೀಣ್ ಶೆಟ್ಟಿ ಮಾವಿನಕಟ್ಟೆ, ಕಿರಣ್ ಕುಮಾರ್ ಮಂಜಿಲ, ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ, ಜನಾರ್ದನ ಬಂಗೇರ ತಿಮರಡ್ಡ, ಕೃಷ್ಣ ಶೆಟ್ಟಿ ಉಮನೊಟ್ಟು, ಉಮೇಶ್ ಶೆಟ್ಟಿ ಕೊನೆರೊಟ್ಟು, ಸುಧೀಂದ್ರ ಶೆಟ್ಟಿ ಕಲಾಯಿದಡ್ಡ, ರಾಜೇಶ್ ಶೆಟ್ಟಿ ಸಿದ್ದಕಟ್ಟೆ, ಸಾಧು ಶೆಟ್ಟಿ ಕಲ್ಲಾಪು, ಜನಾರ್ದನ ನಾಯ್ಕ್ ಸಿದ್ದಕಟ್ಟೆ, ಎಚ್.ಎ. ರೆಹಮಾನ್ ಹೊಕ್ಕಾಡಿಗೋಳಿ, ರಮೇಶ್ ಪೂಜಾರಿ ಕುಂಜಾಡಿ, ಸುರೇಶ್ ಕೆ. ಶೆಟ್ಟಿ ಹಕ್ಕೇರಿ, ಸುಧೀರ್ ಶೆಟ್ಟಿ ಹೊಕ್ಕಾಡಿಗೋಳಿ, ರಾಜು ಗುಮ್ಮಣ್ಣ ಶೆಟ್ಟಿ ಹೊಕ್ಕಾಡಿಗೋಳಿ, ಸುಧಾಕರ ಚೌಟ ಬಾವ ಹೊಸಬೆಟ್ಟು, ಹರೀಶ್ ಶೆಟ್ಟಿ ಹೊಕ್ಕಾಡಿಗೋಳಿ, ಟಿ.ನರಸಿಂಹ ಪೈ ಮಾವಿನಕಟ್ಟೆ, ಆನಂದ ಶೆಟ್ಟಿ ಹಕ್ಕೇರಿ, ಸಂತೋಷ್ ಮಂಜಿಲ, ಸುರೇಶ್ ಎಂ. ಶೆಟ್ಟಿ ಹಕ್ಕೇರಿ, ರಾಧಕೃಷ್ಣ ಶೆಟ್ಟಿ ಉಗ್ರೋಡಿ, ರಘುರಾಮ್ ಶೆಟ್ಟಿ ದೇವಸ್ಯ, ಭುಜಂಗ ಶೆಟ್ಟಿ ಹೊಕ್ಕಾಡಿಗೋಳಿ, ನವೀನ್ ಕುಂಜಾಡಿ, ಲೋಕನಾಥ್ ಶೆಟ್ಟಿ ಪಮುಂಜ, ಗಿರೀಶ್ ಕರ್ಪೆ, ನವೀನ ಹೆಗ್ಡೆ ಮಂಚಕಲ್ಲು ಮತ್ತಿತರರು ಇದ್ದರು.
ಸಮಿತಿ ಗೌರವ ಸಲಹೆಗಾರ ಸುರೇಶ್ ಶೆಟ್ಟಿ ಸಿದ್ದಕಟ್ಟೆ ಸ್ವಾಗತಿಸಿ, ಜಿಲ್ಲಾ ಕಂಬಳ ಸಮಿತಿ ಮಾಜಿ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ ಮತ್ತು ಪ್ರಚಾರ ಸಮಿತಿ ಸಂಚಾಲಕ ಮೋಹನ್ ಕೆ. ಶ್ರೀಯಾನ್ ರಾಯಿ ಕಾರ್ಯಕ್ರಮ ನಿರೂಪಿಸಿದರು.
ಬಾಕ್ಸ್‍ಗೆ:
ಘೋಷಣೆ, ಜೈಕಾರ ಗೊಂದಲ:
ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮತ್ತಿತರ ಗಣ್ಯರು ತೆರಳಿದ ಬಳಿಕ ಆಗಮಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಈ ಹಿಂದೆ ಕಾವಳಮೂಡೂರು ಎಂಬಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉಪಸ್ಥಿತಿಯಲ್ಲಿ ನಾನು 10 ವರ್ಷ ಅದ್ದೂರಿ ಕಂಬಳ ನಡೆಸಿದ್ದೇನೆ. ಇದೇ ವೇಳೆ ಕಂಬಳ ಚಿತ್ರೀಕರಿಸಿದ್ದ ವ್ಯಕ್ತಿಯೊಬ್ಬರು ಕಂಬಳದಲ್ಲಿ ಹಿಂಸೆಯಾಗುತ್ತಿದೆ ಎಂದು ಆರೋಪಿಸಿ ಅಂದಿನ ಕೇಂದ್ರ ಸಚಿವೆ ಮೇನಕಾ ಗಾಂಧಿಗೆ ಸಿ.ಡಿ. ಕಳುಹಿಸಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಕಂಬಳ ಸ್ಥಗಿತಗೊಳ್ಳಲು ಪ್ರಮುಖ ಕಾರಣವಾಗಿದ್ದು, ಅದೇ ವ್ಯಕ್ತಿ ಈಚೆಗೆ ಕಕ್ಯಪದವು ಮೈರ ಎಂಬಲ್ಲಿ ನಡೆದ ಕಂಬಳದಲ್ಲಿ ಪಾಲ್ಗೊಂಡು ಮೆಚ್ಚುಗೆ ವ್ಯಕ್ತಪಡಿಸಿರುವುದು ಎಷ್ಟು ಸರಿ…? ಎಮದು ಪ್ರಶ್ನಿಸಿದರು.
ರೈ ಅವರು ವೇದಿಕೆಯಿಂದ ಇಳಿದು ನೇರವಾಗಿ ಕಂಬಳ ವೀಕ್ಷಣೆಗೆ ತೆರಳಿದ ಬಳಿಕ ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ ಪೂಂಜ ಮಾತನಾಡಿ, ಜಿಲ್ಲೆಯಲ್ಲಿ ಕೇಸರಿ ಮುಂಡಾಸುಧಾರಿ ಯುವಕರಿಂದ ಕಂಬಳ ಉಳಿದಿದೆಯೇ ಹೊರತು ಯಾವುದೇ ಸಿ.ಡಿ.ಯಿಂದ ಅಲ್ಲ ಎಂದು ಟಾಂಗ್ ನೀಡಿದರು.
ಮುಂದಿನ ದಿನಗಳಲ್ಲಿ ಕಂಬಳ ಉಳಿಸುವುದರ ಜೊತೆಗೆ ಗೋಮಾತೆ ಮತ್ತು ಭಾರತ ಮಾತೆಯನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿಯೂ ಯುವಜನರ ಮೇಲಿದೆ ಎಂದು ಹೇಳುತ್ತಿದ್ದಂತೆಯೇ ಯುವಕರು ‘ಜೈಕಾರ’ ಕೂಗಿದರು.
ಇದೇ ವೇಳೆ ರೈ ಅವರು ಮತ್ತೆ ವೇದಿಕೆ ಏರಿ ಕೂರುತ್ತಿದ್ದಂತೆಯೇ ಶಾಸಕ ಪೂಂಜ ನಿರ್ಗಮಿಸಿದಾಗ ಅವರ ಬೆಂಬಲಿಗರು ಮತ್ತೆ ಜೋರಾಗಿ ಜೈಕಾರ ಕೂಗಿದರು. ಇದರಿಂದ ಕೋಪಗೊಂಡ ಮಾಜಿ ಸಚಿವ ಬಿ.ರಮಾನಾಥ ರೈ ಕೂಡಾ ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆಯೇ ಇವರ ಬೆಂಬಲಿಗರು ಕೂಡಾ ಜೈಕಾರ ಕೂಗಿದರು. ಇದೇ ವೇಳೆ ಕೆಲವೊಂದು ಯುವಕರು ಅವರಿಗೆ ಧಿಕ್ಕಾರ ಕೂಗಿ ಅವರ ಕಾರಿನ ಕಡೆಗೆ ನೀರಿನ ಬಾಟಲು ಎಸೆದರು ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಮತ್ತೆ ರೈ ಅವರೊಂದಿಗೆ ವೇದಿಕೆಯಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಇದರಿಂದಾಗಿ ಕೆಲಹೊತ್ತು ಗೊಂದಲ ಉಂಟಾಗಿ ಕಂಬಳ ಕಾರ್ಯಕ್ರಮ ಸ್ಥಗಿತಗೊಳ್ಳುವ ಭೀತಿ ಎದುರಾಯಿತು. ‘ ಇದೊಂದು ದೇವರ ಕಂಬಳ, ಇಲ್ಲಿ ಯಾರು ತಪ್ಪು ಮಾಡಿದರೂ ಅವರಿಗೆ ಪೂಂಜ ಶ್ರೀ ಪಂಚದುರ್ಗಾ ಪರಮೇಶ್ವರಿ ದೇವಿ ಶಿಕ್ಷೆ ನೀಡುತ್ತಾಳೆ’ ಎಂದು ಸಂಘಟಕರು ಧ್ವನಿವರ್ಧಕ ಮೂಲಕ ಎಚ್ಚರಿಕೆ ನೀಡಿ ಎಲ್ಲರನ್ನೂ ಸಮಾಧಾನಪಡಿಸಿದರು.
ತಕ್ಷಣವೇ ಮಾಜಿ ಸಚಿವ ರೈ ಮಾತನಾಡಿ, ಎಲ್ಲಿಯೂ ಇಂತಹ ಘಟನೆ ಮರುಕಳಿಸಬಾರದು. ತಪ್ಪು ಮಾಡಿದವರಿಗೆ ದೇವರು ಶಿಕ್ಷೆ ನೀಡಲಿ. ಕಂಬಳ ಯಶಸ್ವಿಯಾಗಿ ನಡೆಸಲು ಸಹಕರಿಸಿ ಎಂದು ವಿನಂತಿಸಿ ಬಳಿಕ ನಿರ್ಗಮಿಸುತ್ತಿದ್ದಂತೆಯೇ ಅಲ್ಲಿ ಜಮಾಯಿಸಿದ್ದ ಪುಂಜಾಲಕಟ್ಟೆ ಠಾನೆ ಪೊಲೀಸರು ಮತ್ತು ಕಾರ್ಯಕ್ರಮ ಸಂಘಟಕರು ನಿಟ್ಟುಸಿರು ಬಿಟ್ಟರು.
ಕಳೆದ ಒಂದೂವರೆ ತಿಂಗಳಿನಿಂದ ಕಂಬಳ ಸಮಿತಿ ಪದಾಧಿಕಾರಿಗಳು ಮತ್ತು ಸ್ಥಳೀಯರು ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಅವಿರತ ಶ್ರಮ ವಹಿಸಿದ್ದಾರೆ. ಆದರೆ ರಾಜಕಾರಣಿಗಳು ಮಾತ್ರ ಎಲ್ಲಿ , ಏನು ಮಾತನಾಡಬೇಕು ಎಂಬುದನ್ನು ಮರೆತು ಸೌಹಾರ್ದಯುತವಾಗಿ ನಡೆಯುತ್ತಿದ್ದ ಕಂಬಳಕ್ಕೆ ಅನಗತ್ಯ ಆತಂಕ ಒಡ್ಡಿದ್ದಾರೆ ಎಂದು ಸಂಘಟಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *