ಮೂಡುಬಿದಿರೆ: ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಸಹಯೋಗದೊಂದಿಗೆ ವಿಶ್ವಕರ್ಮ ಸಂಸ್ಕøತಿ ಪ್ರಸಾರ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ಚಿತ್ತೂರು ಜಿಲ್ಲಾ ಅದಾಲತ್ ತೀರ್ಪು ದ್ವಿಶತಮಾನೋತ್ಸವ ವರ್ಷಾಚರಣೆಯ ಸಮಾರೋಪವು ಶ್ರೀ ಕ್ಷೇತ್ರದಲ್ಲಿ ಜರಗಿತು.

ವಿಶ್ವಕರ್ಮ ಸಂಸ್ಕøತಿ ಪ್ರಸಾರ ಪ್ರತಿಷ್ಠಾನದ ಸಂಚಾಲಕ ಕುಂಜೂರು ಗಣೇಶ ಆಚಾರ್ಯ ಅವರು ಮಾತನಾಡಿ, ಚಿತ್ತೂರು ಜಿಲ್ಲಾ ಅದಾಲತ್ ತೀರ್ಪಿನ ಹಿನ್ನಲೆಯಲ್ಲಿ ವಿವರಿಸಿ ಬ್ರಿಟಿಷ್ ಆಡಳಿತಾವಧಿಯಲ್ಲಿ ಅಂದಿನ ನ್ಯಾಯವಾದಿಗಳು ನ್ಯಾಯಾಧೀಶರು ಭಾರತೀಯ ಸಂಸ್ಕøತಿ, ಸಮುದಾಯಗಳ ಕುರಿತು ಆಳವಾದ ಅಧ್ಯಯನ ನಡೆಸಿ ನಿಖರವಾದ ತೀರ್ಪುಗಳನ್ನು ನೀಡುವ ಮೂಲಕ ವೃತ್ತಿಪರತೆಯನ್ನು ನಿಖರವಾಗಿ ತೋರ್ಪಡಿಸುತ್ತಿದ್ದರು. ಅವರು ನೀಡುತ್ತಿದ್ದ ತೀರ್ಪುಗಳು ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದ್ದು, ಆ ಪೈಕಿ ಚಿತ್ತೂರು ಜಿಲ್ಲಾ ಅದಾಲತ್ ತೀರ್ಪು ಕೂಡ ಒಂದು ಪ್ರಮುಖ ತೀರ್ಪಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂದು ಕ್ಷೇತ್ರದ ಆಡಳಿತ ಮೊಕ್ತೇಸರ ಜಯಕರ ಪುರೋಹಿತ್ ಅಧ್ಯಕ್ಷತೆ ವಹಿಸಿದ್ದರು.
ವಿಶ್ವಬ್ರಾಹ್ಮಣ ಧರ್ಮ ಸಂಸ್ಕøತಿ ಪ್ರವರ್ತಕ ಹೈಕಾಡಿ ಶಂಕರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮೊಕ್ತೇಸರ ಶಿವರಾಮ ಆಚಾರ್ಯ ಉಳಿಯ, ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷೆ ಪ್ರಭಾವತಿ ಗೋಪಾಲ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಭಾಸ್ಕರ ಆಚಾರ್ಯ ಪಾಲ್ತಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.