ವಿಟ್ಲ;ದ ಕ ಜಿ ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಕ್ಕೆತ್ತೂರು ಇಲ್ಲಿಯ 4 ನೇ ತರಗತಿ ವಿದ್ಯಾರ್ಥಿ ಸುಜಿತ್ ಇವರು ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಮಾರ್ಷಲ್ ಆಟ್ರ್ಸ್ ಶಿಟೊ-ರಿಯೋ ಕರಾಟೆ-ಡು ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯ ಬಾಲಕರ ವೈಯಕ್ತಿಕ ಕಟಾ ಮತ್ತು ಕುಮಿಟೆ ವಿಭಾಗಳಲ್ಲಿ ಚಿನ್ನದ ಪದಕ ಹಾಗೂ ಗ್ರೂಪ್ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಗಳಿಸಿದ್ದಾರೆ. ಸುರುಳಿಮೂಲೆ ಪಾದೆಮಜಲು ಸುಂದರ ಮತ್ತು ಲಲಿತ ಇವರ ಪುತ್ರ. ಕರಾಟೆ ಶಿಕ್ಷಕ ಮಾಧವ ಅಳಿಕೆ ಇವರ ಶಿಷ್ಯ.
