ಬಂಟ್ವಾಳ: ಕಾಲೇಜು ದಿನಾಚರಣೆಯು ಒಂದು ಉತ್ಸವ. ಇದು ವಿದ್ಯಾರ್ಥಿಗಳು,ಅಧ್ಯಾಪಕರು ಮತ್ತು ಹೆತ್ತವರ ಸಮಾಗಮದ ಅಪೂರ್ವ ಸಂದರ್ಭ. ಕಾಲೇಜು ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಮೊಬೈಲ್ ವಾಟ್ಸಪ್ ಇತ್ಯಾದಿ ಆಧುನಿಕ ತಂತ್ರಜ್ಞಾನಗಳ ದಾಸರಾಗದೆ ಕಲಿಕೆ ಎಂಬ ಸಾಧನೆಯ ಹಾದಿಯಲ್ಲಿ ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಆ ದಿಕ್ಕಿನಲ್ಲಿ ಮುಂದುವರಿಯಬೇಕು. ಇಲ್ಲಿ ಅದ್ಯಾಪಕರು ಮಾರ್ಗದರ್ಶಕರು ಮಾತ್ರ ಆಗಿದ್ದು, ವಿದ್ಯಾರ್ಥಿಗಳ ಸ್ವ ಅಧ್ಯಾಯ ಮಹತ್ತರವಾದ ಪಾತ್ರ ವಹಿಸುತ್ತದೆ. ಎಂದು ಅಕಾಡಮಿ ಆಫ್ ಜನರಲ್ ಎಜುಕೇಶನ್ ಮಣಿಪಾಲ ಇದರ ಆಡಳಿತಾಧಿಕಾರಿ ಡಾ| ಹೆಚ್ ಶಾಂತಾರಾಮ್ ಹೇಳಿದರು.
ಅವರು ಇಂದು ಬಂಟ್ವಾಳದ ಶ್ರೀ ವಂಕಟರಮಣ ಸ್ವಾವಿೂ ಪದವಿ ಮತ್ತು ಪದವಿ ಪೂರ್ವ ಕಾಲೇಜಿನ 51ನೇ ಕಾಲೇಜು ದಿನಾಚರಣೆ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಮಾತನಾಡುತ್ತಿದ್ದರು
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶಶಿಕಲಾ ಕೆ. ಪದವಿ ಮತ್ತು ಪದವಿ ಪೂರ್ವ ಕಾಲೇಜಿನ ವರದಿಗಳನ್ನು ಮಂಡಿಸಿದರು 2018 ಏಪ್ರಿಲ್ ತಿಂಗಳಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆಯಲ್ಲಿ ಬಿ.ಎಸ್ಸಿಯಲ್ಲಿ 4ನೇ ರ್ಯಾಂಕ್ ಗಳಿಸಿದ ಕುಮಾರಿ ಸುರಕ್ಷಾ ಮತ್ತು ಬಿ.ಎಸ್ಸಿ.ಯಲ್ಲಿ 9ನೇ ರ್ಯಾಂಕ್ ಗಳಿಸಿದ ಕುಮಾರಿ ನತಾಶಾ ಜಾಸ್ಮಿನ್ ಇವರನ್ನು ಕಾಲೇಜಿನ ವತಿಯಿಂದ ಮುಖ್ಯ ಅತಿಥಿ ಗೌರವಿಸಿದರು.
ಉಪಪ್ರಾಶುಪಾಲರಾದ ಡಾ| ಹೆಚ್. ಆರ್ ಸುಜಾತ ಇವರು ಸ್ವಾಗತಿಸಿದರು, ಆಂಗ್ಲ ಉಪನ್ಯಾಸಕಿ ಶ್ರೀಮತಿ ಶಾಂತಿರೋಚಿ ಅತಿಥಿ ಪರಿಚಯ ಮಾಡಿದರು. ದತ್ತಿನಿಧಿ ಬಹುಮಾನ ವಿಜೇತರ ಪಟ್ಟಿಯನ್ನು ವಾಣಿಜ್ಯಶಾಸ್ತ್ರದ ಮುಖ್ಯಸ್ಥರಾದ ಶ್ರೀಮತಿ ಅಖಿಲಾ ಪೈ ಇವರು ವಾಚಿಸಿದರು. ಕಾಲೇಜು ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ವಿವಿಧ ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಸ್ಪರ್ಧೆಗಳ ಪಟ್ಟಿಯನ್ನು ಪದವಿ ವಿಭಾUದಲ್ಲಿÀ ಹಿಂದಿ ವಿಭಾಗದ ಮುಖ್ಯಸ್ಥರಾದ ಡಾ| ಮಂಜುನಾಥ ಉಡುಪ ಕೆ. ಹಾಗೂ ಪದವಿಪೂರ್ವ ವಿಭಾಗದಲ್ಲಿ ಗಣಿತಶಾಸ್ತ್ರದ ಉಪನ್ಯಾಸಕಿ ಶ್ರೀಮತಿ ಕವಿತ ಇವರು ವಾಚಿಸಿದರು. ಉಪನ್ಯಾಸಕಿ ಶ್ರೀಮತಿ ಶಶಿಕಲಾ ಎಮ್ .ಪಿ ವಂದಿಸಿದರು. ವಿದ್ಯಾರ್ಥಿನಿ ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು.