ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ರಾಷ್ಟ್ರೀಯ ಹೆದ್ದಾರಿ ಹಳೆ ಟೋಲ್ಗೇಟ್ ಬಳಿ ಸಭಾಂಗಣದಲ್ಲಿ ಭಾನುವಾರ ಶುಭ ಕಾರ್ಯಕ್ರಮ ನಡೆಯುತ್ತಿದ್ದ ಪರಿಣಾಮ ಮಧ್ಯಾಹ್ನ ಕೆಲಹೊತ್ತು ಇಲ್ಲಿನ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ಪಂಜಿಕಲ್ಲು ಬ್ರಹ್ಮ ಬೈದರ್ಕಳ ಜಾತ್ರೆ ನೆಪದಲ್ಲಿ ಸಂಚಾರಿ ಠಾಣೆ ಪೊಲೀಸರು ಬಾರದೆ ವಾಹನ ಸವಾರರು ಪರದಾಡುವಂತಾಯಿತು ಎಂದು ಆರೋಪಿಸಿದ್ದಾರೆ.