ಮೂಡುಬಿದಿರೆ: ಸಾಧನೆಗೆ ಯಾವುದೇ ಮಾಧ್ಯಮ ಮುಖ್ಯವಲ್ಲ. ಕನ್ನಡ ಮಾಧ್ಯಮದಲ್ಲಿ ಕಲಿತರೂ ಜೀವನದಲ್ಲಿ ಮುಂದೆ ಬರಬಹುದು ಹಾಗೂ ಗೌರವ ಸಂಪಾದಿಸಬಹುದು. ಕಲಿತ ಭಾಷೆಯ ಬಗ್ಗೆ ಕೀಳರಿಮೆ ಸಲ್ಲದು ಎಂದು ಕರ್ನಾಟಕ ಲೋಕಾಯುಕ್ತ ಜಸ್ಟಿಸ್ ವಿಶ್ವನಾಥ ಶೆಟ್ಟಿ ಹೇಳಿದರು.
ಬೆಳುವಾಯಿ ಮೈನ್ ಸರ್ಕಾರಿ ಮಾದರಿ ಉನ್ನತೀಕರಿಸಿದ ಶಾಸಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆವಿದ್ಯಾರ್ಥಿ ಸಂಘ ಮತ್ತು ಶಾಲಾ ಮೇಲುಸ್ತುವಾರಿ ಸಮಿತಿಯ ವತಿಯಿಂದ ಶನಿವಾರ ನಡೆದ ಗುರುವಂದನೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾಷಾ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ ಕರ್ನಾಟಕಕ್ಕೆ ಸೀಮಿತವಲ್ಲ. ಎಲ್ಲಾ ರಾಜ್ಯಗಳಲ್ಲಿಯೂ ಕನ್ನಡ ಕಲಿಕೆಯ ಸಮಸ್ಯೆಯಿದೆ. ಪ್ರತೀ ಮಗುವಿಗೆ ಶಿಕ್ಷಣಾವಕಾಶ ಕಲ್ಪಿಸುವುದು ಸರ್ಕಾರದ, ಸಮಾಜದ ಕರ್ತವ್ಯ ಅದಕ್ಕಾಗಿ ಶಿಕ್ಷಕರು ಪೋಷಕರು ಸನ್ಮಾರ್ಗದಲ್ಲಿ ಸಾಗಲು ಪ್ರೇರಣೆ ನಿಡಬೇಕು. ಮಕ್ಕಳ ಚಲನವಲನಗಳ ಬಗ್ಗೆ ನಿಗಾ ಇಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯೆ ಸುಜಾತ ಕೆ ಪಿ, ತಾ ಪಂ ಸದಸ್ಯ ಸಂತೋಷ್ ಬಿ, ಗ್ರಾ.ಪಂ ಮಾಜಿ ಅಧ್ಯಕ್ಷ ಭಾಸ್ಕರ ಆಚಾರ್ಯ ಉದ್ಯಮಿ ನಂದಕುಮಾರ್ ಆರ್.ಕುಡ್ವ. ಉಡುಪಿ ಎಸ್‍ಡಿಎಂ ಆಯುರ್ವೇದ ಆಸ್ಪತ್ರೆಯ ವೈದ್ಯೆ ಡಾ.ಪ್ರೇಮಲತಾ ರತ್ನಾಕರ ಶೆಟ್ಟಿ ಭಾಗವಹಿಸಿದರು .
ನಿವೃತ್ತ ಮುಖ್ಯ ಶಿಕ್ಷಕ ಫಣಿರಾಜ್ ಎಂ ನಿವೃತ್ತ ಶಿಕ್ಷಕಿ ಸುಲೋಚನಿ ಕುಮಾರಿ ಅವರನ್ನು ಸನ್ಮಾನಿಸಿ ಗುರುವಂದನೆ ಸಲ್ಲಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯನಿ ಶಾಲಾ ಚಟುವಟಿಕೆಗಳ ವಿವರ ನೀಡಿದರು. ಎಸ್‍ಡಿಎಂಸಿ ಅಧ್ಯಕ್ಷ ಭಾಸ್ಕರ ಆಚಾರ್ಯ ಸ್ವಾಗತಿಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರವೀಣ್ ಜೈನ್ ವಂದಿಸಿದರು
ಟಿವಿ ನಿರೂಪಕಿ ಶಮೀರಾ ಬೆಳುವಾಯಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಶಾಲಾ ಮಕ್ಕಳಿಂದ ಸಾಂಸ್ಕøತಿಕ ವೈವಿಧ್ಯ ನಡೆಯಿತು.