ಬಂಟ್ವಾಳ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಹಾಗೂ ರೋಟರಿ ಕ್ಲಬ್ ಇದರ ಸಹಕಾರದೊಂದಿಗೆ ಪಾಣೆಮಂಗಳೂರು ಸುಮಂಗಲಾ ಕಲ್ಯಾಣ ಮಂಟಪದಲ್ಲಿ ಜರಗಿದ ಸ್ಥಳೀಯ ಸಂಸ್ಥೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಾರ್ಷಿಕ ರ್ಯಾಲಿ ಕಬ್ಸ್-ಬುಲ್ ಬುಲ್ಸ್ ಉತ್ಸವ ಮತ್ತು ಪ್ರಶಸ್ತಿ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ರಸ್ತೆ ದಾಟಲು ಸಹಕರಿಸುವ ಸಮಾಜ ಸೇವಕ ಡಿ.ಎ.ರೆಹಮಾನ್ ಪಟೇಲ್ ರವರನ್ನು ಮಾಜಿ ಸಚಿವ ಬಿ.ರಮಾನಾಥ ರೈ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಅಮ್ಟೂರು ಚರ್ಚ್ ಧರ್ಮಗುರು ರೆ/ಡಾ.ಮಾರ್ಕ ಕ್ಯಾಸ್ತೆಲಿನೋ, ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಕಾರಂತ್ ನರಿಕೊಂಬು, ತಾ.ಪಂ.ಸದಸ್ಯೆ ರ ವೀಂದ್ರ ಸಪಲ್ಯ, ಸಮಾಜ ಸೇವಕ ಪಾಂಡುರಂಗ ಪ್ರಭು, ಸಮಾಜ ಸೇವಕಿ ಯಮುನ ಉಪಸ್ಥಿತರಿದ್ದರು.