ಸುದ್ದಿ9:ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತೆಂಗು ಬೆಳೆಗಾರರಿಗೆ ಸಿಗುವ ವಿವಿಧ ಸೌಲಭ್ಯ ಪಡೆಯುವುದರ ಜೊತೆಗೆ ತೆಂಗು ಬೆಳೆಗಾರರ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟನೆ ಮೂಲಕ ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಪ್ರಗತಿಪರ ಕೃಷಿಕ, ಬಂಟ್ವಾಳ ತಾಲ್ಲೂಕಿನ ತೆಂಗು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಪಿ.ರಾಜಶೇಖರ ರೈ ಹೇಳಿದ್ದಾರೆ.
ತಾಲ್ಲೂಕಿನ ತೆಂಗು ಉತ್ಪಾದಕರ ಒಕ್ಕೂಟ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಸೋಮವಾರ ಬಿ.ಸಿ.ರೋಡ್ನಲ್ಲಿ ಏರ್ಪಡಿಸಿದ್ದ ವಿಶೇಷ ಕಾರ್ಯಗಾರರು ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ಪತ್ರಕರ್ತ ರಾಜಾ ಬಂಟ್ವಾಳ ಮಾತನಾಡಿ, ತೆಂಗಿನ ಮರದಿಂದ ನೀರಾದಂತಹ ಅತ್ಯುತ್ತಮ ಪಾನೀಯ ಸಿದ್ಧಪಡಿಸಲು ಸಾಧ್ಯವಿದೆ ಎಂದರು.
ಒಕ್ಕೂಟ ಉಪಾಧ್ಯಕ್ಷ ಕೆ.ಪದ್ಮನಾಭ ರೈ, ಪದಾಧಿಕಾರಿಗಳಾದ ಎಂ. ಸುಂದರ ಬೆಳ್ಚಡ, ಗೋಡ್ಫ್ರೀ ಫೆರ್ನಾಂಡಿಸ್, ಮಹಮ್ಮದ್ ನಂದರಬೆಟ್ಟು, ಆಲ್ಫೋನ್ಸ್ ಮಿನೇಜಸ್, ಎಂ.ಪದ್ಮರಾಜ ಬಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಮುಖರಾದ ಮೋಹನ್ ಕುಮಾರ್, ಬೇಬಿ ಶೆಟ್ಟಿ, ಮಹಮ್ಮದ್ ಸಾಲೆ, ಶೈಲಜಾ ಕೆ., ರಾಜೇಶ್ ಕುಮಾರ್ ಬಾಳೆಕಲ್ಲು , ಪ್ರಕಾಶ್ ಕುಮಾರ್ ಜೈನ್ ಮತ್ತಿತರರು ಕಾರ್ಯಗಾರದಲ್ಲಿ ಪಾಲ್ಗೊಂಡರು.
ಸಹಾಯಕ ತೋಟಕಾರಿಕಾ ನಿರ್ದೇಶಕ ಎ.ಸಂಜೀವ ನಾಯ್ಕ ಸ್ವಾಗತಿಸಿ, ಕಾರ್ಯದರ್ಶಿ ಮಹಮ್ಮದ್ ನಂದರಬೆಟ್ಟು ವಂದಿಸಿದರು.