ವಿಟ್ಲ: ಜೆಸಿಐ ಘಟಕಕ್ಕೆ ಜೆಸಿಐ ಇಂಡಿಯಾದ ರಾಷ್ಟ್ರೀಯ ಉಪಾಧ್ಯಕ್ಷ ಜೆಸಿಐ ಸೆನೆಟರ್ ಅನೀಶ್ ಸಿ ಬೇಟಿ ನೀಡಿದರು. ಅವರು ಈ ಸಂದರ್ಭದಲ್ಲಿ ವಿಟ್ಲ ಜೆಸಿಐ ವತಿಯಿಂದ ನಿರ್ಮಿಸಲಾದ ಶಾಶ್ವತ ಯೋಜನೆಗಳಾದ ನಾಮಫಲಕಗಳನ್ನು ಚಂದಳಿಕೆ ಮತ್ತು ಕಾಶೀಮಠ ರಸ್ತೆಗಳಲ್ಲಿ ಹಾಗೂ ದೇವಸ್ಥಾನ ರಸ್ತೆಯಲ್ಲಿ ಸೂಚನಾ ಫಲಕಗಳನ್ನು ಅನಾವರಣ ಗೊಳಿಸಿದರು.

SHV_2180

ನಂತರ ಲೂವಿಸ್ ಮಸ್ಕರೇನಸ್ ಸಂಜೋಜನೆಯಲ್ಲಿ ವಿಟ್ಲ ಬೊಬ್ಬೆಕ್ಕೇರಿ ಪುಷ್ಪಕ್ ಹೆಲ್ತ್ ಸೆಂಟರ್‍ನಲ್ಲಿ ರಕ್ತದಾನ ಶಿಬಿರವನ್ನು ನಡೆಸಲಾಯಿತು. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ಉಪಾಧ್ಯಕ್ಷ ಅನೀಶ್ ಸಿ ಉದ್ಘಾಟಿಸಿದರು. ವಿಟ್ಲ ಜೆಸಿಐ ಅಧ್ಯಕ್ಷ ಬಾಲಕೃಷ್ಣ ವಿಟ್ಲ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಲಯಾಧ್ಯಕ್ಷ ಅಶೋಕ್ ಚೂಂತಾರು ಮತ್ತು ವಲಯ ಸಂಯೋಜಕ ಬಾಬು ಕೆ ವಿ ಭಾಗವಹಿಸಿದ್ದರು. ವಲಯ ಉಪಾಧ್ಯಕ್ಷರಾದ ಕಾರ್ತಿಕೇಯ ಮಧ್ಯಸ್ಥ, ದಾಮೋದರ್ ಪಾಟಾಳಿ, ರಾಯನ್ ಕ್ರಾಸ್ತಾ ವೇದಿಕೆಯಲ್ಲಿದ್ದರು.
ಪುತ್ತೂರು ರೋಟರಿ ಕ್ಯಾಂಚೊ ಬ್ಲಡ್ ಬ್ಯಾಂಕ್ ಸಹಕಾರದೊಂದಿಗೆ ನಡೆದ ರಕ್ತದಾನ ಶಿಬಿರಕ್ಕೆ ಪುಷ್ಪಕ್ ಹೆಲ್ತ್ ಸೆಂಟರಿನ ಡಾ| ವಿ ಕೆ ಹೆಗ್ಡೆ ರಕ್ತದಾನ ಮಾಡುವ ಮೂಲಕ ಚಾಲನೆ ನೀಡಿದರು. 45 ಕ್ಕೂ ಮಿಕ್ಕಿ ದಾನಿಗಳು ಮತ್ತು ಜೆಸಿಐ ಹಾಗೂ ಜೆಸಿರೆಟ್ ಸದಸ್ಯರು ರಕ್ತದಾನ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ಅಧ್ಯಕ್ಷ ಬಾಲಕೃಷ್ಣ ವಿಟ್ಲ ಸ್ವಾಗತಿಸಿದರು. ಕಾರ್ಯದರ್ಶಿ ಸಂದೀಪ್ ವಂದಿಸಿದರು.

SHV_2171

By suddi9

Leave a Reply

Your email address will not be published. Required fields are marked *