ಬಂಟ್ವಾಳ: ಕೊಯಿಲ ಗ್ರಾಮದ ಬಬ್ಬರಬೈಲು ದೈವಸ್ಥಾನದಲ್ಲಿ ಬೊಬ್ಬರ್ಯ ದೈವದ ವಾರ್ಷಿಕ ನೇಮೋತ್ಸವ ಶನಿವಾರ ನಡೆಯಿತು. ಸಮಿತಿ ಸಂಚಾಲಕ ವಸಂತ ಕುಮಾರ್ ಅಣ್ಣಳಿಕೆ, ಪ್ರಮುಖರಾದ ಹರಿಶ್ಚಂದ್ರ ಹೆಗ್ಡೆ, ಜಯಂತ ಪಿಲ್ಕಾಜೆ, ಶೇಖರ ಪಿಲ್ಕಾಜೆಗುತ್ತು, ಹರಿಪ್ರಸಾದ್ ಭಟ್, ಪ್ರಕಾಶ್ ಕುಮಾರ್ ಜೈನ್ ಪೀರ್ದಬೆಟ್ಟು ಮತ್ತಿತರರು ಇದ್ದರು. ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮತ್ತಿತರರ ಗಣ್ಯರು ಭೇಟಿ ನೀಡಿದರು.
