ಬಂಟ್ವಾಳ: ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರಕ್ಕೊಳಪಟ್ಟ  ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಮತದಾನಕ್ಕೆ  ಸಂಪೂರ್ಣ ಸಜ್ಜಾಗಿದೆ ಎಂದು ಎ.ಆರ್.ಒ. ಮಹೇಶ್ ತಿಳಿಸಿದ್ದಾರೆ. ತಾಲೂಕು ಕಂದಾಯ ಇಲಾಖೆಯ ಚುನಾವಣಾ ಕಛೇರಿಯಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಶಾಂತಿಯುತ ಮತದಾನಕ್ಕಾಗಿ ಸಕಲ ವ್ಯವಸ್ಥೆಯೊಂದಿಗೆ  ತಾಲೂಕಾಡಳಿತ ಸಜ್ಜಾಗಿದ್ದು, ಚುನಾವಣಾ ಕಾರ್ಯಕ್ಕೆ ಭಾಗವಹಿಸುವ  ಸಿಬಂದಿಗಳಿಗೂ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ ಎಂದರು. ಯಾವುದೇ ಗೊಂದಲ ಗಳಿಗೆ ಅವಕಾಶವಿಲ್ಲದೆ ಶಾಂತಯುತವಾಗಿ ಚುನಾವಣೆ ನಡೆಯುವ  ವಿಶ್ವಾಸವನ್ನು ಅವರು ಈಸಂದರ್ಭದಲ್ಲಿ ವ್ಯಕ್ತಪಡಿಸಿದರು. ಬಂಟ್ವಾಳ ವಿಧಾನ‌ಸಭಾ ಕ್ಷೇತ್ರದಲ್ಲಿ ಒಟ್ಟು 222166 ಮತದಾರರಿದ್ದು,ಈ ಪೈಕಿ 1,09,351 ಪುರುಷರು ಹಾಗೂ 1,12,810 ಮಹಿಳಾ ಹಾಗೂ ಐವರು  ಮಂಗಳಮುಖಿ ಮತದಾರರಿದ್ದಾರೆ ಎಂದ ಅವರು ಇಲ್ಲಿ ಮಹಿಳಾ ಮತದಾರರೇ ಅಧಿಕ ಸಂಖ್ಯೆಯಲ್ಲಿದ್ದಾರೆ ಎಂದರು.

01-29-05-IMG20190416173912-768x576

ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 249 ಮತಗಟ್ಟೆಗಳಿದ್ದು,85 ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳನ್ನಾಗಿ ಗುರುತಿಸಲಾಗಿದೆ. 35 ಮತಗಟ್ಟೆಗಳಲ್ಲಿ ಮೈಕ್ರೋ ಅಫೀಸರ್ ಗಳನ್ನು ನೇಮಿಸಲಾಗಿದ್ದು, 17 ಕಡೆಗಳಲ್ಲಿ ನೇರವಾಗಿ ವೆಬ್ ಕಾಸ್ಟಿಂಗ್ ಸಿಸ್ಟೆಮ್ ವ್ಯವಸ್ಥೆ ಮಾಡಲಾಗಿದೆ.  15 ಮತಗಟ್ಟೆಗಳಲ್ಲಿ ಪೂರ್ಣ ಪ್ರಮಾಣದ ವೀಡಿಯೋ ಗ್ರಾಫರ್ ಗಳನ್ನು ಹಾಕಲಾಗಿದೆ ಎಂದು ವಿವರಿಸಿದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬೂತ್ ನಂ.61  ಸಂಗಬೆಟ್ಟು ಶಾಲೆಯನ್ನು ಪಿಂಕ್‌ ಬೂತ್ ಎಂದು ಪರಿಗಣಿಸಿ ಅಲ್ಲಿಗೆ ವಿಶೇಷ ವಾಗಿ ಪೂರ್ವ ಸಿದ್ಧತೆಗಳನ್ನು ಮಾಡಲಾಗಿದೆ.
ವಿಕಲ ಚೇತನರಿಗೆ , ಆಶಕ್ತರಿಗೆ ಗ್ರಾಮ ಪಂಚಾಯತ್ ವತಿಯಿಂದ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮತಗಟ್ಟೆಗಳ ಸಂಖ್ಯೆಗನುಗುಣವಾಗಿ ಒಂದು ಅಥವಾ ಎರಡು ವಾಹನಗಳ ವ್ಯವಸ್ಥೆ ಮಾಡಲಾಗುತ್ತಿದ್ದು ಅಮೂಲಕ ವಿಕಲಚೇತನರು ಆಶಕ್ತರು ಮತದಾನ ಮಾಡಲು ಅವಕಾಶ ನೀಡಲಾಗಿದೆ. ಮತಗಟ್ಟೆಗಳಿಗೆ ತೆರಳುವ ಸಿಬ್ಬಂದಿ ಗಳಿಗೆ ನೀರಿನ ಹಾಗೂ ಊಟದ ವ್ಯವಸ್ಥೆಯ ಜೊತೆ   ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದರು.  ಎಸ್ಪಿ ಭೇಟಿ: ಚುನಾವಣೆಯ ಹಿನ್ನಲೆಯಲ್ಲಿ  ಭದ್ರತಾ ವ್ಯವಸ್ಥೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಮೀಪ್ರಸಾದ್  ಪರಿಶೀಲನೆ ನಡೆಸಿದರು. ಮೊಡಂಕಾಪು ಮಸ್ಟರಿಂಗ್ ಮತ್ತು ಡಿ.ಮಸ್ಟರಿಂಗ್ ಕೇಂದ್ರ ಕ್ಕೆ ಬೇಟಿ ನೀಡಿ ಅಲ್ಲಿನ ವ್ಯವಸ್ಥೆಯ ಬಗ್ಗೆ  ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ  ಚರ್ಚೆ ನಡೆಸಿ ಶಾಂತಯುತ ಮತದಾನಕ್ಕೆ ಕೈ ಗೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿ ನೀಡಿದರು.
ಸೂಕ್ಷ್ಮ ಮತಗಟ್ಟೆಗಳಿಗೆ ಸಿಬ್ಬಂದಿ ಗಳ ಜೊತೆ ಹೆಚ್ಚುವರಿಯಾಗಿ ಸಿ.ಆರ್.ಪಿ.ಸಿಬಂದಿಗಳನ್ನು ಹಾಕಲಾಗಿದೆ.ಬಂಟ್ವಾಳದಲ್ಲಿ ಹೆಚ್ಚುವರಿ  ಕೆ.ಎಸ್.ಆರ್.ಪಿ.ಜೊತೆಗೆ   300 ಹೋಮ್ ಗಾಡ್೯ ಸಿಬಂದಿಗಳು ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿಸಿದರು

By suddi9

Leave a Reply

Your email address will not be published. Required fields are marked *