ಮೂಡುಬಿದಿರೆ : ಸಮಾಜದಲ್ಲಿ ಅಶಕ್ತರಾಗಿರುವ ನಾಲ್ಕು ಫಲಾನುಭವಿಗಳಿಗೆ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಆರ್ಥಿಕ ನೆರವನ್ನು ಭಾನುವಾರ ಹಸ್ತಾಂತರಿಸಲಾಯಿತು.

ಕಾರ್ಕಳ ತಾಲೂಕಿನ ವಂಜಾರಕಟ್ಟೆ ದಾಸಂದಕಲ್ಲು ಎಂಬಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟ ಗಗನ್ ಹೆತ್ತವರಿಗೆ, ಮೆದುಳು ಮತ್ತು ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ತಂಗಡಿ ಕಕ್ಕಿಂಜೆ ದೊರ್ತಾಡಿಕೊಪ್ಪ ತೋಟತ್ತಾಡಿ ಹರೀಶ್ ಕುಲಾಲ್ ಭವಾನಿ ದಂಪತಿಯ ಮಕ್ಕಳಾದ ಲಾವಣ್ಯ ಮತ್ತು ತನ್ವಿತ್ ಚಿಕಿತ್ಸೆಗೆ, ಮೆದುಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರು ಗಂಜಿಮಠ ಬಡಗುಳಿಪಾಡಿ ಗಾಂಧಿನಗರ ಸಂಜೀವ ಪೂಜಾರಿ ಶೋಭಾ ದಂಪತಿಯ ಪುತ್ರ ಜಯರಾಮ್ಗೆ ಮತ್ತು ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿರುವ ಬೆಳ್ತಂಗಡಿ ಗುಂಡೂರಿ ಪೆರ್ಲಾಪು ದಿವಂಗತ ರಾಜು ದೇವಾಡಿಗರ ಪುತ್ರ ಪದ್ಮಪ್ರಸಾದ್ ಸೇರಿದಂತೆ ಒಟ್ಟು ನಾಲ್ಕು ಕುಟುಂಬಗಳಿಗೆ ತಲಾ 20,000 ಸಾವಿರದಂತೆ ಆರ್ಥಿಕ ನೆರವಿನ ಚೆಕ್ ಅನ್ನು ಮೂಡುಬಿದಿರೆ ಪ್ರೆಸ್ಕ್ಲಬ್ ಆವರಣದಲ್ಲಿ ವಿತರಿಸಲಾಯಿತು.
ಮೂಡುಬಿದಿರೆ ಪ್ರೆಸ್ಕ್ಲಬ್ನ ಅಧ್ಯಕ್ಷ ವೇಣುಗೋಪಾಲ್, ಪ್ರೆಸ್ಕ್ಲಬ್ ಸದಸ್ಯರು, ತುಳುನಾಡ ಪೊರ್ಲು ಸೇವಾ ಟ್ರಸ್ಟ್ನ ಸದಸ್ಯರು ಉಪಸ್ಥಿತರಿದ್ದರು.