ಬಂಟ್ವಾಳ: ತಾಲೂಕು ಪಂಚಾಯತ್ ವತಿಯಿಂದ ತಾಲೂಕಿನ ಗ್ರಾ.ಪಂ.ಮಟ್ಟದ ಸಂಜೀವಿನಿ ಒಕ್ಕೂಟಗಳ ಸ್ವ ಉದ್ಯೋಗ ತರಬೇತಿ ಹಾಗೂ ಮಾಹಿತಿ ಕಾರ್ಯಗಾರ ತಾಲೂಕು ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣ ದಲ್ಲಿ ಶುಕ್ರವಾರ ನಡೆಯಿತು.
ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ರಾಜಣ್ಣ ಮಹಿಳೆಯರು ಸ್ವಉದ್ಯೋಗದ ಮೂಲಕ ಸಮಾಜದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದ್ದು, ಮಹಿಳೆಯರ ಆರ್ಥಿಕವಾಗಿ ಸಬಲರಾಗಲು ಸರಕಾರ ಹಲವಾರು ಯೋಜನೆಯನ್ಬು ರೂಪಿಸಿದೆ ಎಂದರು.
ತಾಲೂಕಿನ 58 ಗ್ರಾ.ಪಂ.ಗಳ ಪೈಕಿ 40 ಗ್ರಾ.ಪಂ.ಗಳಲ್ಲಿ ಎನ್. ಆರ್. ಎಲ್. ಎಂ. ಸಂಜೀವಿನಿ ಯೋಜನೆಯಡಿ ಗ್ರಾ.ಪಂ.ಮಟ್ಟದ ಒಕ್ಕೂಟ ರಚನೆಯಾಗಿದ್ದು, ಸ್ವಸಹಾಯ ಗುಂಪುಗಳಲ್ಲಿ ಜೀವನೋಪಾಯ ಚಟುವಟಿಕೆ ನಡೆಸಿ ಆರ್ಥಿಕ ವಾಗಿ ಸಬಲೀಕರಣಗೊಳಿಸಲು ಸ್ವಸಹಾಯ ಸಂಘ ದ ಸದಸ್ಯ ರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸತೀಶ್ ಮಾಬೆನ್ ಮಂಗಳೂರು, ಕಾಸರಗೋಡು ಕೃಷಿ ವಿಜ್ಞಾನ ಕೇಂದ್ರ ದ ಅಧಿಕಾರಿ ಪಾಂಡುರಂಗ ಕೆ. ಎನ್.ಆರ್.ಎಲ್.ಎಮ್.ನ ಜಿಲ್ಲಾ ಕಾರ್ಯ ಕ್ರಮ ವ್ಯವಸ್ಥಾಪಕ ಹರಿಪ್ರಸಾದ್, ಸಿಡಾಕ್ ಮಂಗಳೂರು ಇದರ ಸಮಾಲೋಚಕಿ ಪ್ರವೀಶ್ಯ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಪ್ರಶಾಂತ್ ಬಳಂಜ ಪ್ರಾಸ್ತಾವಿಕ ವಾಗಿ ಮಾತನಾಡಿ, ಸ್ವಾಗತಿಸಿದರು.ವಲಯಮೇಲ್ವಿಚಾರಕ ಕುಶಾಲಪ್ಪ ವಂದಿಸಿದರು.

