ಬಂಟ್ವಾಳ:  ನರೆಂದ ಮೋದಿ ಎರಡನೆ ಭಾರಿಗೆ  ಭಾರತದ ಪ್ರದಾನಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪರಿಣಾಮ ಹಾಗೂ ಲೋಕ ಸಭಾ ಚುನಾವಣೆ ಯಲ್ಲಿ     ಸಂಸದರಾಗಿ ನಳಿನ್ ಕುಮಾರ್ ಕಟೀಲ್ ರವರು ಅಭೂತಪೂರ್ವ ಜಯಗಳಿಸಿರುವ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕಿನ  ಸಿದ್ದಕಟ್ಟೆಯಲ್ಲಿ ವಿಜಯೋತ್ಸವ ಮೆರವಣಿಗೆ   ವಿಜೃಂಬಣೆಯಿಂದ ಜರುಗಿತು.ಸಿದ್ದಕಟ್ಟೆ  ಪೇಟೆಯುದ್ದಕ್ಕೂ ಮೆರವಣಿಗೆಯಲ್ಲಿ  ಸಾಗಿ ಬಂದ ಬಿಜೆಪಿ ಕಾರ್ಯಕರ್ತರು ಜೈಕಾರ  ಹಾಕುತ್ತಾ  ಕುಣಿದು ಕುಪ್ಪಳಿಸಿದರು.
IMG-20190604-WA0035
ನಂತರ ನಡೆದ  ಅಭಿಂದನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಭಾಗವಹಿಸಿ ಮಾತನಾಡಿ,
ಕಾರ್ಯಕರ್ತರ ಹಗಳಿರುಳು ದುಡಿದ ಪರಿಣಾಮವಾಗಿ ಮತ್ತು  ಶಾಸಕ ರಾಜೇಶ್ ನಾಯ್ಕ್ ರವರ ಸೇವೆ ಯಿಂದಾಗಿ  ಬಂಟ್ವಾಳ ಕ್ಷೇತ್ರದಲ್ಲೂ 32 ಸಾವಿರ  ಮತ ಗಳ ಲೀಡ್ ಪಡೆಯಲು ಕಾರಣವಾಯಿತು ಕಾರ್ಯಕರ್ತ    ಶ್ರಮಕ್ಕೆ ಅಭಿನಂದನೆ ಸಲ್ಲಿಸಿದರು.
IMG-20190604-WA0011
ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಮಾತಾಡಿ ರಾಷ್ತ್ರ ಭಕ್ತ ಕಾರ್ಯಕರ್ತ ರ ಅಪೇಕ್ಷೆಯಂತೆ  ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾಗಿರುವುದರ  ಹಿಂದೆ ಅವರ ಪರಿಶ್ರಮ,ಪ್ರಾಮಣಿಕ ಸೇವೆ,ಮತ್ತು ದಾಳಿಗೆ ಪ್ರತಿ ದಾಳಿ ಎಂಬಂತೆ ಜಗತ್ತೀಗೆ ಭಾರತದ ಪರಿಚಯ ಮಾಡಿಸಿದ ಎಕೈಕ ಪ್ರಧಾನಿ.ತಾನು ತಿನ್ನೊಲ್ಲ ಇತರರಿಗೆ ತಿನ್ನೊಕ್ಕೆ ಬಿಡಲ್ಲ ಎಂಬ ವೇದ ವಾಕ್ಯದಂತೆ  ನಡೆದಿದ್ದಾರೆ    ಎಂದರು.
ಸಂಗಬೆಟ್ಟು ಮಹಾಶಕ್ತಿ   ಕೇಂದ್ರದ ಅದ್ಯಕ್ಷ ರತ್ನಕುಮಾರ್ ಚೌಟ  ಸ್ವಾಗತಿಸಿದರು.
ಸಭೆಯಲ್ಲಿ ಸಂಗಬೆಟ್ಟು ಗ್ರಾ.ಅದ್ಯಕ್ಷೆ ಗುಲಾಬಿ ಶೆಟ್ಟಿ, ಉಪಾಧ್ಯಕ್ಷ ಸತೀಶ್ ಪೂಜಾರಿ , ಸದಸ್ಯರಾದ ಮಾದವ ಶೆಟ್ತಿಗಾರ್,ಎಸ್.ಪಿ.ಶ್ರೀಧರ್,ಸುರೇಶ್ ಕುಲಾಲ್ ,ವಿಮಲ ಮೊಹನ್ ,ಸುಲೊಚನ, ಸಂಗಬೆಟ್ಟು ಗ್ರಾ.ಪಂಚಾಯತ್ ಬಿ.ಜೆ.ಪಿ.ಸಮಿತಿ ಅದ್ಯಕ್ಷ ಉಮೇಶ್ ಗೌಡ ಮಂಚಕಲ್,ಪ್ರಮುಖರಾದ ಸಂದೇಶ್ ಶೆಟ್ಟಿ,ಹರೀಶ್ ಆಚಾರ್ಯ ರಾಯಿ,ಸಂಜೀವ ಕರ್ಕೆರಾ , ಪೊಡುಂಬ,ರಾಮಕೃಷ್ಣ ನಾಯಕ್,ನವೀನ ಪೂಜಾರಿ ಕರ್ಪೆ,ಚಂದ್ರಶೇಖರ ಪೂವಳ,  ಕವಿತ ಶೆಟ್ಟಿ ಗಾರ್ ಶಶಿಕಲ ಕಲ್ಪನೆ,ಶೊಭಾ, ತೇಜಾಸ್   ಕರ್ಪೆ ,ಪರೆಮೆಶ್ವರ ಪೂಜಾರಿ ರಾಯಿ,ಹರಿಪ್ರಸಾದ್ ಆಚಾರ್ಯ ಉಪ್ಪಿರ, ಶೇಖರ್ ಶೆಟ್ಟಿ ಬದ್ಯಾರ್  ಮತ್ತಿತರಿದ್ದರು.
 ಸುಂದರ ಶೆಟ್ಟಿ ಗಾರ್ ಸಂಗಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *