ಅಥಣಿ- ಇಂದಿನ ಆಧುನಿಕ ಜಗತ್ತಿನಲ್ಲಿ ತಮ್ಮ ಹುಟ್ಟುಹಬ್ಬವನ್ನು ಏನೇನೋ ರಂಗು ರಂಗಿನ ಕಾರ್ಯಕ್ರಮಗಳನ್ನು ಧೂಮ ಧೂಮಾಗಿ ಆಚರಿಸುವುದು ಸರ್ವೇ ಸಾಮಾನ್ಯವಾಗಿದೆ ಅದರಲ್ಲಿ ಇಂತಹ ಬಿರು ಬೇಸಿಗೆಯಲ್ಲಿ ಹನಿ ಹನಿ ನೀರಿಗೂ ತಾತ್ವಾರ ಉಂಟಾಗಿರುವ ಸಂದರ್ಭದಲ್ಲಿ ತನ್ನ ಹುಟ್ಟುಹಬ್ಬದಂದು ಸಾರ್ವಜನಿಕರಿಗೆ ಉಚಿತವಾಗಿ ನೀರು ಪೂರೈಸಿ ವಿಶಿಷ್ಟವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಎಲ್ಲರ ಗಮನ ಸೆಳೆದ ಶಿಕ್ಷಕಿ ಪ್ರಿಯವಂದಾ ಅಣೆಪ್ಪನವರ.
ಅವರು ಸ್ಥಳೀಯ ಜೆ ಎ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕನ್ನಡ ಭಾಷಾ ವಿಷಯದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು ತಮ್ಮ ಪಾಠ ಬೋಧನೆ, ಶಿಸ್ತು, ನಡವಳಿಕೆ, ಸಲಹೆ, ಮಾರ್ಗದರ್ಶನ, ಸಮಾಜ ಸೇವೆ ಇತ್ಯಾದಿಗಳ ಮೂಲಕವಾಗಿ ಅಪಾರ ವಿಧ್ಯಾರ್ಥಿಗಳ ಪಾವಿತ್ಯ ಸ್ಥಾನವನ್ನು ಪಡೆದಿದ್ದಾರೆ. ಅಂತಹ ತಮ್ಮ ನೆಚ್ಚಿನಶಿಕ್ಷಕಿಯ ಹುಟ್ಟುಹಬ್ಬವನ್ನು ವಿನೂತನವಾಗಿ ಆಚರಿಸಬೇಕೆಂದು ಸಂತೋಷ ಬಡಕಂಬಿ, ರವಿ ಬಡಕಂಬಿ , ಶಶೀಧರ ಬರ್ಲಿ, ಸಚಿನ ಅವಟಿ, ಅಭಯ ಸಗರಿ, ಅಕ್ಷಯ ಕಾರ್ವೆಕರ, ಅನೀಲ ಪೂಜಾರಿ ಅವರುಗಳು ಸೇರಿಕೊಂಡು ವಿನೂತನವಾಗಿ ಸಧ್ಯದ ಪರಿಸ್ಥಿತಿಗೆ ಅನುಕೂಲವಾಗಲೆಂದು ಸಾರ್ವಜನಿಕರಿಗೆ ನೀರಿನ ಅವಶ್ಯಕತೆಯನ್ನು ಪೂರೈಸಬೇಕೆಂದು ನೀರಿನ ಟ್ಯಾಂಕರನ್ನು ತಂದು ಶಿಕ್ಷಕಿಯ ಕೈಯಿಂದಲೇ ಸಾರ್ವಜನಿಕರಿಗೆ ಉಚಿತವಾಗಿ ನೀರನ್ನು ಹಂಚುವ ಪ್ರಕ್ರಿಯೆಗ ಚಾಲನೆಯನ್ನು ನೀಡಿ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿದರು.
ಸ್ಥಳೀಯರು ಸಹ ಈ ವಿಶಿಷ್ಟ ಕಾರ್ಯವನ್ನು ಕಂಡು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಶಿಕ್ಷಕಿಯ ಹುಟ್ಟುಹಬ್ಬಕ್ಕೆ ಹರಸಿದರು, ನಂತರ ನೀರು ಹಂಚಿ ಮಾತನಾಡಿದ ಪ್ರಿಯಂವದಾ ಶಿಕ್ಷಕಿನನ್ನ ಜೀವನದ ಅವಿಸ್ಮರಣೀಯ ಕ್ಷಣಕ್ಕೆ ಈ ದಿನ ಸಾಕ್ಷಿಯಾಯಿತು ಅದರಲ್ಲೂ ನನ್ನ ಈ ವಿಧ್ಯಾರ್ಥಿಗಳ ಸಾಮಾಜಿಕ ಚಿಂತನೆಯು ನನ್ನ ಶಿಕ್ಷಕಿ ವೃತ್ತಿಗೆ ಖುಷಿಯನ್ನು ನೀಡಿದೆ ಹಾಗೂ ಈ ಕ್ಷಣವನ್ನು ನಾನೆಂದು ಮರೆಯುವುದಿಲ್ಲ ಎಂದರು.
ಸಂತೋಷ ಬಡಕಂಬಿ- ನಮ್ಮ ನೆಚ್ಚನ ಶಿಕ್ಷಕಿಯ ಹುಟ್ಟುಹಬ್ಬದಂದು ಅವರಿಗೆ ವಿನೂತನವಾದ ಉಡುಗೂರೆಯನ್ನು ನೀಡಬೇಕೆಂದು ನಾವೆಲ್ಲರೂ ಹುಡುಕುತ್ತಿದ್ದಾಗ ಈ ನೀರು ಪೂರೈಸುವ ವಿಚಾರ ಬಂದಿತು ಅದಕ್ಕಾಗಿ ನಾವೆಲ್ಲ ಸ್ನೇಹಿತ ಮಿತ್ರರು ಸೇರಿಕೊಂಡು ಈ ನೀರು ಹಂಚುವ ಕಾರ್ಯವನ್ನು ಹಮ್ಮಿಕೊಂಡೆವು ಈ ಕಾರ್ಯಕ್ಕೆ ನೆಚ್ಚಿನ ಶಿಕ್ಷಕಿಯಿಂಧ ಮೆಚ್ಚುಗೆ ವ್ಯಕ್ತವಾಗಿದ್ದು ಅತೀವ ಸಂತಸವಾಗಿದೆ.
