ಬಂಟ್ವಾಳ: ಇಲ್ಲಿನ ಬಿ.ಆರ್.ಎಂ.ಪಿ.ಸಿ.ಪಿ. ಶಾಲೆಯಲ್ಲಿ ವಿಶ್ವ ಬಾಲ ಕಾರ್ಮಿಕ ವಿರೊಧಿ ದಿನಾಚರಣೆಯ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮ ನಡೆಯಿತು.
೯ನೇ ತರಗತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಹಸನ, ಗಾಯನ, ನೃತ್ಯ ಮುಂತಾದವುಗಳ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನಗೊಳಿಸಿ, ಬಾಲಕರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕೆಂಬ ಸಂದೇಶವನ್ನು ಸಾರಿದರು.

ಬಾಲ ಕಾರ್ಮಿಕತೆ ಒಂದು ಪಿಡುಗು, ಬಾಲ ಕಾರ್ಮಿಕರ ನಿರ್ಮೂಲನೆಗೆ ಸಾಮಾಜಿಕ ಜಾಗೃತಿ ಅವಶ್ಯ ಎಂಬುದನ್ನು ಎಲ್ಲರಿಗೂ ಮನದಟ್ಟು ಮಾಡಿದರು. ಶಾಲಾ ಪ್ರಿನ್ಸಿಪಾಲ್ ರಮಾಶಂಕರ್ ಸಿ., ಶಿಕ್ಷಕ-ಶಿಕ್ಷಕೇತರ ವೃಂದದವರು ಈ ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ನಮಿತಾಂಜಲಿ ಮಾರ್ಗದರ್ಶನದಲ್ಲಿ ನಡೆದ ಕಾರ್‍ಯಕ್ರಮವನ್ನು, ವಿದ್ಯಾರ್ಥಿನಿ ಸಿಂಚನಾ ಸಿ. ನಿರ್ವಹಿಸಿದರು.