ಸುದ್ದಿ9ಬಂಟ್ವಾಳ:ತಾಲ್ಲೂಕಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಯಿಲ ಸಮೀಪದ ಹೋರಂಗಳ ಎಂಬಲ್ಲಿ ಪಂಚಾಯಿತಿ ನೀರಿನ ಟ್ಯಾಂಕಿಗೆ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಸಂಜೀವ ಪೂಜಾರಿ ಎಂಬವರ ಪತ್ನಿ ಮೋಹಿನಿ (50) ಎಂದು ಗುರುತಿಸಲಾಗಿದೆ. ಕಳೆದ ಕೆಲವು ಸಮಯದಿಂದ ಅಸೌಖ್ಯದಿಂದ ಬಳಲುತ್ತಿದ್ದ ಇವರು ಗುರುವಾರ ಮನೆಯಲ್ಲಿ ಎಂದಿನಂತೆ ಮಲಗಿದ್ದು, ಮುಂಜಾನೆ ವೇಳೆ ಮನೆ ಸಮೀಪದಲ್ಲೇ ಇರುವ ಪಂಚಾಯಿತಿ ಕುಡಿಯುವ ನೀರಿನ ಟ್ಯಾಂಕಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶುಕ್ರವಾರ ಬೆಳಿಗ್ಗೆ ಎಂದಿನಂತೆ ಕುಡಿಯುವ ನೀರು ಇದೇ ಟ್ಯಾಂಕಿನಿಂದ ಪೂರೈಕೆಯಾಗಿದ್ದು, ಮನೆ ಮಂದಿ ಶುಕ್ರವಾರ ಬೆಳಿಗ್ಗೆ ಮೋಹಿನಿ ಅವರನ್ನು ಹುಡುಕುತ್ತಿರುವ ವೇಳೆ ಟ್ಯಾಂಕಿನ ಮುಚ್ಚಳ ತೆರೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಮೃತರಿಗೆ ಇಬ್ಬರು ಪುತ್ರರು ಮತ್ತು ಪುತ್ರಿ ಇದ್ದಾರೆ.
ರಾಯಿ ಗ್ರಾ.ಪಂ.ಅಧ್ಯಕ್ಷೆ ಇಮದಿರಾ ಮಧುಕರ ಬಂಗೇರ, ಮಾಜಿ ಅಧ್ಯಕ್ಷ ಹರೀಶ ಆಚಾರ್ಯ, ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಮತ್ತಿತರರು ಭೇಟಿ ನಿಡಿದ್ದಾರೆ.

—

By suddi9

Leave a Reply

Your email address will not be published. Required fields are marked *