ಬಂಟ್ವಾಳ : ಕರ್ನಾಟಕ ವಿಕಾಸ ಗ್ರಾಮೀಣ(ಕೆ.ವಿ.ಜಿ) ಬ್ಯಾಂಕಿನಲ್ಲಿ ಸುಮಾರು 35 ವರ್ಷ ನಾನಾ ಶಾಖೆಗಳಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ ಕುಶಲ್ ರಾಜ್(56) ಜು.6ರಂದು ಶನಿವಾರ ರಾತ್ರಿ ಬಂಟ್ವಾಳ ತಾಲೂಕಿನ ಕೂರಿಯಾಳದ ಪಾಲೆದಗುರಿಯಲ್ಲಿರುವ ತನ್ನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಕೆ.ವಿ.ಜಿ ಬ್ಯಾಂಕಿನ ವ್ಯವಸ್ಥಾಪಕ ನಿರ್ಧೇಶಕ ಗಣೇಶ ಶೆಣೈ, ಬಿಲ್ಲವ ಮುಖಂಡ ಸೇಸಪ್ಪ ಕೋಟ್ಯಾನ್, ಜಿಪಂ ಸದಸ್ಯ ರವೀಂದ್ರ ಕಂಬಳಿ, ಜಿ ಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಮಾಜಿ ತಾ. ಪಂ . ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆ. ಸಂಜೀವ ಪೂಜಾರಿ ಗುರುಕೃಪಾ, ಬೇಬಿ ಕುಂದರ್, ಅಮ್ಟಾಡಿ ಗ್ರಾಪಂ ಅಧ್ಯಕ್ಷ ಹರೀಶ ಶೆಟ್ಟಿ, ತಾ. ಪಂ .ಸದಸ್ಯೆ ಮಲ್ಲಿಕಾ , ತಾ.ಪಂ ಸದಸ್ಯ ಗಣೇಶ್ ಪೂಜಾರಿ. ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ವರ್ಗ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಹಾಗೂ ಅವರ ಹಿತ್ಯೆಷಿ ಗಳು, ಗಣ್ಯರು ಮ್ರತರ ಅಂತಿಮ ದರ್ಶನ ಪಡೆದರು.
