ಬಂಟ್ವಾಳ: ತಾಲೂಕಿನ ಕರೋಪಾಡಿ ಗ್ರಾಮದ ಪಾದೆ ಕಲ್ಲು ಎಂಬಲ್ಲಿ ಕಾನೂನು ಉಲ್ಲಂಘಿಸಿ ನಡೆಸಲಾಗುತ್ತಿದ್ದ ಕೆಂಪುಕಲ್ಲಿನ ಮೂರು ಕೋರೆಗಳಿಗೆ ಏಕಕಾಲದಲ್ಲಿ ಇಂದು ಮಂಗಳವಾರ ದಿಢೀರ್ ದಾಳಿ ಕಾರ್ಯಾಚರಣೆ ನಡೆದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ  ಉಪ ನಿರ್ದೇಶಕರಾದ ಪದ್ಮಶ್ರೀ ಹಾಗೂ ಬಂಟ್ವಾಳ ತಹಶೀಲ್ದಾರರಾದ ರಶ್ಮಿ ಎಸ್ ಆರ್ ಇವರ ಜಂಟಿ ನೇತೃತ್ವದಲ್ಲಿ ಕೆಂಪು ಕಲ್ಲು ಕೋರೆ ಗೆ ದಾಳಿ ನಡೆಸಲಾಗಿರುತ್ತದೆ.89017020-366a-42c7-bd8b-4dd7f48f5502

ಅಧಿಕಾರಿಗಳ ಸಹಕಾರದೊಂದಿಗೆ  ಭಾರೀ ಸೊತ್ತನ್ನು  ಸ್ಥಳಕ್ಕೆ ಕ್ರೇನ್ ತರಿಸಿ ಕ್ರೇನ್ ಸಹಕಾರದಿಂದ ಸ್ವತ್ತುಗಳನ್ನು ವಶ ಪಡಿಸಿಕೊಂಡು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರ ಮಾಡಿದರು. ದಾಳಿಯ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಒಂದು ಲಾರಿ ಕಲ್ಲು, ಕಡಿಯಲು ಉಪಯೋಗಿಸುವ  ದೊಡ್ಡ ಮೆಷಿನ್ ಯಂತ್ರ ಇನ್ನಿತರ ಕಲ್ಲು ತೆಗೆಯುವ  ಇತರ ಸೊತ್ತುಗಳನ್ನು ವಶ ಪಡಿಸಿಕೊಂಡು ಮುಂದಿನ ತನಿಖೆ ನಡೆಸುತಿದ್ದಾರೆ.eb352add-2e66-400c-a45d-94725613fb24

ದಾಳಿಯ ಸಂದರ್ಭದಲ್ಲಿ ಭೂ ವಿಜ್ಞಾನ ಇಲಾಖೆಯ ಬಿ ಕೆ ಮೂರ್ತಿ, ವಿಟ್ಲ ಠಾಣಾಧಿಕಾರಿಗಳು, ವಿಟ್ಲ ಕಂದಾಯ ನಿರೀಕ್ಷಕ ದಿವಾಕರ ಮುಗುಳಿಯ, ಕರೋಪಾಡಿ ಗ್ರಾಮ ಲೆಕ್ಕಾಧಿಕಾರಿ ಅನಿಲ್ ಕುಮಾರ್ ಸಿಬ್ಬಂದಿಗಳಾದ ಮೊಯಿದಿಕುಂಞ, ಗಿರೀಶ್, ಶಿವಪ್ರಸಾದ್ ಸಹಕರಿಸಿದರು.b4d8bfc0-a165-4869-ac16-77062a14e05f

By suddi9

Leave a Reply

Your email address will not be published. Required fields are marked *