ಬಂಟ್ವಾಳ ತಾಲ್ಲೂಕಿನ ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮ್ಮಾ ಮಸೀದಿಯ ಮದ್ರಸ ವಿದ್ಯಾಥರ್ಿಗಳ ಸಂಘಟನೆ (ಸಮಸ್ತ ಕೇರಳ ಸುನ್ನಿ ಬಾಲವೇದಿ ಇದರ ನೂತನ ಅಧ್ಯಕ್ಷರಾಗಿ ಮುಹಮ್ಮದ್ ನಜೀಬ್ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಮದನಿ, ಕೋಶಾಧಿಕಾರಿಯಾಗಿ ರಿಫಾಅತ್ ಯೂಸುಫ್, ಸಲಹೆಗಾರರಾಗಿ ಅಬ್ದುಲ್ ಕರೀಂ ಫೈಝಿ, ಚೇರ್ಮೆನ್ ಆಗಿ ಅಬೂಬಕ್ಕರ್ ಮುಸ್ಲಿಯಾರ್ ಮತ್ತು ಇತರ 18 ಮಂದಿಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆಯ್ಕೆಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
