ಕೋಲಾರ : ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಸೆಕ್ಷನ್ 370 ಮತ್ತು 35ಎ ನ್ನು ರದ್ದುಗೊಳಿಸಿದ ಮೋದಿ ಮತ್ತು ಅಮಿತ್ ಷಾ ಸರ್ಕಾರದ ದೈರ್ಯಕ್ಕೆ ಮೆಚ್ಚಿ ರೈತ ನಾಯಕ ಪ್ರೋ. ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೋಲಾರ ಜಿಲ್ಲಾ ಘಟಕ ವತಿಯಿಂದ ಕೋಲಾರದ ಕಾಲೇಜು ವೃತ್ತದಲ್ಲಿ ವಿಜಯೋತ್ಸವ ಆಚರಣೆ ಮಾಡಿ ಸಿಹಿ ಹಂಚಿ ಸಂಭ್ರಮಿಸಲಾಯಿತು.Vijayothsava

ರೈತ ಸಂಘದ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ಮಾತನಾಡಿ ಸ್ವಾತಂತ್ರ್ಯ ಬಂದ ನಂತರ ಸುಮಾರು ವರ್ಷಗಳು ಸರ್ಕಾರಗಳು ಜಮ್ಮು-ಕಾಶ್ಮೀರದ ಪಾಕಿಸ್ಥಾನ ಆಕ್ರಮಿತ ಸ್ಥಳದ ವಿಚಾರವಾಗಿ ಯಾರೂ ತಲೆಕೆಸಿಕೊಳ್ಳದೆ ಸುಮಾರು ಸೈನಿಕರು ವೀರಮರಣ ಹೊಂದಿ ಸೈನಿಕರು ಜಮ್ಮು ಕಾಶ್ಮೀರದ ಪ್ರತ್ಯೇಕತಾ ವಾದಿಗಳಿಂದ ಅವಮಾನಿತರಾಗುತ್ತಿದ್ದರು. ಆದರೂ ನಮ್ಮ ಆಳುವಂತಹ ಸರ್ಕಾರಗಳು ಸೈನಿಕರಿಗೆ ಧೈರ್ಯ ತುಂಬುವಂತಹ ಕೆಲಸ ಜಮ್ಮುಕಾಶ್ಮೀರದಲ್ಲಿರುವ ಭಾರತದ ಪ್ರಜೆಗಳಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ವಿಫಲರಾಗಿದ್ದರು.vijayothsava1

ಜಮ್ಮು ಕಾಶ್ಮೀರಕ್ಕೆ ಸಂವಿಧಾನದಲ್ಲಿ ಪ್ರತ್ಯೇಕ ಸ್ಥಾನಮಾನವನ್ನು ಸೆಕ್ಷನ್ 370 ಮತ್ತು 35ಎ ಪ್ರಕಾರ 6 ವರ್ಷ ಚುನಾವಣೆಯಲ್ಲಿ ನಿಲ್ಲುವಂತಹ ಅಭ್ಯರ್ಥಿಗಳಿಗೆ ಅಧಿಕಾರ ನೀಡುವುದು ಮತ್ತು ದೇಶದ ಯಾವುದೇ ಮೂಲೆಯ ಭಾರತದ ಪ್ರಜೆಯು ಜಮ್ಮು ಕಶ್ಮೀರದಲ್ಲಿ ಆಸ್ತಿ ಕೊಳ್ಳಲು ಅರ್ಹರಾಗಿರುವುದಿಲ್ಲ ಎಂಬ ಕಾನೂನನ್ನು ರೂಪಿಸಲಾಗಿತ್ತು. ಏಕೆಂದರೆ ಅಲ್ಲಿನ ಭಾರತೀಯ ಪ್ರಜೆಗಳಿಗೆ ಮೂಲಭೂತ ಹಕ್ಕುಗಳು ಸಿಗಬೇಕು ಎಂಬ ದೃಷ್ಠಿಯಿಂದ ಕಾನೂನು ರೂಪಿಸಲಾಗಿತ್ತು. ಆದರೆ ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಪ್ರತ್ಯೇಕತವಾದಿಗಳು ಹಾಗೂ ನಮ್ಮ ಕಡುವೈರಿ ಪಾಕಿಸ್ಥಾನದ ಜೊತೆ ಸೇರಿ ನಿರಂತರ ಯುದ್ಧದ ಕಾರ್ಮೋಡ ದಿನನಿತ್ಯ ಆವರಿಸಿಕೊಂಡಿತ್ತು. ಜನ ಬಯಬೀತರಾಗಿ ಜೀವನ ನಡೆಸುತ್ತಿದ್ದರು.

ಈಗ ಸಮ್ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‍ಷಾ ರವರ ಒಂದೇ ದೇಶ ಒಂದೇ ಭಾರತ ಅಖಂಡ ಭಾರತವನ್ನಾಗಿ ಮಾಡಲು ಸೆಕ್ಷನ್ 370 ಮತ್ತು 35ಎ ನ್ನು ರದ್ದು ಮಾಡಿದಕ್ಕೆ ಸಂತಸ ವ್ಯಪ್ತಪಡಿಸಿದ ಸಂದರ್ಭದಲ್ಲಿ ದೇಶಕ್ಕಾಗಿ ಒಳ್ಳೆ ಕೆಲಸ ಮಾಡುವ ಯಾವುದೇ ರಾಜಕಾರಣಿ ಅಥವಾ ಅಧಿಕಾರಿಯನ್ನು ಪಕ್ಷಾತೀತವಾಗಿ ಜಾತ್ಯತೀತವಾಗಿ ಸಂಘಟನಾ ತೀತವಾಗಿ ಅಭಿನಂದಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಶ್ರೀನಿವಾಸಪುರ ತಾಲ್ಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರಪ್ಪ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಎಲ್.ಎನ್.ಬಾಬು, ಕೋಲಾರ ತಾಲ್ಲೂಕು ಅಧ್ಯಕ್ಷ ಶಿಳ್ಳಂಗೆರೆ ವೇಣು, ಕೆಂಬೋಡಿ ಕೃಷ್ಣೆಗೌಡ, ಹರೀಶ್, ತೇರಹಳ್ಳಿ ಚಂದ್ರಪ್ಪ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು

By suddi9

Leave a Reply

Your email address will not be published. Required fields are marked *