ಬಂಟ್ವಾಳ: ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ವತಿಯಿಂದ ಬಂಟ್ವಾಳಕ್ಕೆ ಸಮೀಪದ ನಾವೂರ ಹರಿಯಪ್ಪ ವಿಜಯ್ ಅವರ ಮನೆಯಲ್ಲಿ ಮಳೆಕೊಯ್ಲು ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಿತು. ಯೋಜನೆಯ ದ.ಕ.ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ,ಮಳೆಕೊಯ್ಲು ಮೂಲಕ ನೀರನ್ನು ಸಂರಕ್ಷಿಸಿದರೆ ಭವಿಷ್ಯದಲ್ಲಾಗುವ ನೀರಿನ ಅಭಾವವನ್ನು ತಡೆಗಟ್ಟಬಹುದು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷ ಚಂದಪ್ಪ ಅವರು ಮಾತನಾಡಿ,ನಮ್ಮ ಸುತ್ತಮುತ್ತಲಿನ ಭೂಮಿ,ಮನೆ,ಮೇಲ್ಚಾವಣಿಯಿಂದ ಯಥೇಚ್ಚವಾಗಿ ಹರಿದು ಸಮುದ್ರ ಸೇರುವ ನೀರನ್ನು ಸಂರಕ್ಷಿಸಲು ಕಾರ್ಯ ಯೋಜನೆ ರೂಪಿಸಲು ಇದು ಪ್ರೇರಣೆಯಾಗಿದೆ ಎಂದರು.ಅತಿಥಿಯಾಗಿದ್ದ ತಾಲೂಕು ಯೋಜನಾಧಿಕಾರಿ ಪಿ.ಜಯಾನಂದ ಅವರು ಮಾತನಾಡಿ ತಾಲೂಕಿನಲ್ಲಿ ಪ್ರಸ್ತುತ200 ಘಟಕಗಳಲ್ಲಿ ಮಳೆಕೊಯ್ಲು ಪ್ರಾತ್ಯಕ್ಷಿಕೆಗೆ ಕ್ರೀಯಾಯೋಜನೆ ಹಾಕಿಕೊಳ್ಳಲಾಗಿದೆ ಎಂದರು.
ಬಂಟ್ವಾಳ ವಲಯದ ಅಧ್ಯಕ್ಷ ವಸಂತ ಮೂಲ್ಯ,ಬಿ.ಸಿ.ರೋಡ್ ವಲಯದ ಅಧ್ಯಕ್ಷ ಶೇಖರ ಸಾಮಾನಿ,ಕೇಂದ್ರ ಒಕ್ಕೂಟದ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ,ಸದಾನಂದ ನಾವೂರ, ಬಂಟ್ವಾಳ ವಲಯದ ಎಲ್ಲಾ ಒಕ್ಕೂಟದ ಅಧ್ಯಕ್ಷರು,ಮೇಲ್ವಚಾರಕರು,ಸೇವಾಪ್