ಶ್ರೀನಿವಾಸಪುರ: ಸಾರ್ವಜನಿಕರು ನಾಡಿನನೆರೆ ಸಂತ್ರಸ್ತರ ನೆರವಿಗೆ ಕೈಲಾದ ಸಹಾಯ  ಮಾಡಬೇಕು. ನೈಸರ್ಗಿಕ ವಿಕೋಪದಿಂದ ನಲುಗಿರುವ ಜನರ ಕನಿಷ್ಠ ಅಗತ್ಯಗಳನ್ನು ಪೂರೈಸಲು ಮುಂದಾಗಬೇಕು ಎಂದು ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ದಿಂಬಾಲ ಅಶೋಕ್‌ ಹೇಳಿದರು.
12
ಪಟ್ಟಣದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಭಾನುವಾರ ಏರ್ಪಡಿಸಿದ್ದ  ನೆರ ಸಂತ್ರಸ್ತರಿಗೆ ನೆರವು ಸಂಗ್ರಹ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಕಂಡರಿಯದ ರೀತಿಯಲ್ಲಿ ಮಳೆ ಸಾವು ನೋವು ಉಂಟುಮಾಡಿದೆ. ಇಂಥ ಸಂದರ್ಭದಲ್ಲಿ ಮಾನವೀಯತೆ ಮೆರೆಯಬೇಕು. ಅವರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ಸಾರ್ವನಿಕರು ನೀಡುವ ನೆರವನ್ನು ನೆರೆ ಸಂತ್ರಸ್ತರಿಗೆ ತಲುಪಿಸಲಾಗುವುದು.  ಸಂತ್ರಸ್ತರ ನೋವನ್ನು ಹಂಚಿಕೊಳ್ಳಬೇಕು ಎಂದು ಹೇಳಿದರು. ಮುಖಂಡರಾದ ಬಿ.ಎಲ್‌.ಪ್ರಕಾಶ್‌, ಕೆ.ಕೆ.ಮಂಜುನಾಥರೆಡ್ಡಿ, ಕೃಷ್ಣಾರೆಡ್ಡಿ ಇದ್ದರು.
Attachments area

 

By suddi9

Leave a Reply

Your email address will not be published. Required fields are marked *