ಕಡಬ:ದ.ಕ.ಜಿ.ಪಂ.ಹಿ.ಪ್ರಾ.ಶಾಲೆ   ಪೆರಾಬೆ ಸರಕಾರಿ ಶಾಲೆ ಉಳಿಸಿ ಬೆಳೆಸಿ ಅಭಿಯಾನಕ್ಕೆ ಅ.15ರಂದು ಚಾಲನೆ ನೀಡಲಾಯಿತು. ನಿವೃತ ವಾಯುಸೇನಾ ದಂಡಧಿಕಾರಿ ಕೆ.ಬಿ.ಶೆಟ್ಟಿ ಇವರು ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.IMG-20190817-WA0030

ರಾಮನಗರ ಜೆಲ್ಲೆ ಬಿ.ಜೆ.ಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಮಾನ್ಯ ವರದರಾಜ್ ಗೌಡ ಇವರು ಅದೃಷ್ಟ ಚೀಟಿ ಕರಪತ್ರ ಬಿಡುಗಡೆ ಮಾಡುವುದರ ಮೂಲಕ
ಅಭೀಯಾನಕ್ಕೆ ಚಾಲನೆ ನೀಡಿದರು.IMG-20190817-WA0031

ಜೊತೆಗೆ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಒಟ್ಟು ರೂ.32000/-ಮೌಲ್ಯದ ಸಮವಸ್ತ್ರವನ್ನು ಉಚಿತವಾಗಿ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಿ.ಎ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಪ್ರಶಾಂತ್ ರೈ, ಶರವೂರು ದೇವಸ್ಥಾನ ಮುಕ್ತೇಸರರಾದ ಕಮಲಾಕ್ಷ ರೈ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಗಂಗಾಧರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೋಹನದಾಸ ರೈ, ನಿವೃತ್ತ ಮುಖ್ಯಶಿಕ್ಷಕ ನಾಗಪ್ಪಗೌಡ, ಗ್ರಾ.ಪಂ. ಉಪಾಧ್ಯಕ್ಷರಾದ ಜನಾರ್ಧನ ಶೆಟ್ಟಿ, ಮುಖ್ಯಶಿಕ್ಷಕಿ ಹೇಮಲತಾ ಪ್ರದೀಪ್ , ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *